ಕಾಸರಗೋಡು ಗಡಿಯಲ್ಲಿ ರಸ್ತೆಗೆ ಮಣ್ಣು ಸುರಿದು ಬಂದ್: ರಾಜ್ಯ ಸಂಪರ್ಕ ಕಡಿತ

0
616

ಸನ್ಮಾರ್ಗ ವಾರ್ತೆ

ಕಾಸರಗೋಡು, ಮಾ. 27: ರಾಜ್ಯದೊಂದಿಗೆ ಗಡಿ ಹಂಚಿಕೊಳ್ಳುತ್ತಿರುವ ಕೇರಳದ ಕಾಸರಗೋಡು ಜಿಲ್ಲೆಯ ರಸ್ತೆಗಳನ್ನು ಕರ್ನಾಟಕದ ಪೊಲೀಸರು ಬುಲ್ಡೋಜರ್ ಮೂಲಕ ಮಣ್ಣು ಹಾಕಿ ಮುಚ್ಚುತ್ತಿದ್ದಾರೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ. ದೇಲಂಪಾಡಿ, ವರ್ಕಾಡಿ, ಪೈವಳಿಕೆ, ಮಂಜೇಶ್ವರ, ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ . ಇಲ್ಲಿನ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.

ರಸ್ತೆ ಮುಚ್ಚಿದ್ದರಿಂದ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಯವರೇ ಹೇಳಿದರೂ ಮಣ್ಣು ತೆರವುಗೊಳಿಸಲು ಕರ್ನಾಟಕ ಸರಕಾರ ಸಿದ್ಧವಾಗಿಲ್ಲ ಎಂದು ಕಾಸರಗೋಡು ಎಸ್ಪಿ ಪಿಎಸ್ ಸಾಬು ತಿಳಿಸಿದರೆಂದು ಮೀಡಿಯ ವನ್ ವರದಿ ಮಾಡಿದೆ.