ಕಾಶ್ಮೀರದಲ್ಲಿ ಪತ್ರಕರ್ತನ ಬಂಧನ

0
246

ಸನ್ಮಾರ್ಗ ವಾರ್ತೆ

ಶ್ರೀನಗರ,ಆ.16: ಕಾಶ್ಮೀರದಲ್ಲಿ ಬುಧವಾರ ಮಧ್ಯರಾತ್ರಿ ಪೊಲೀಸರು ದಾಳಿ ಮಾಡಿ ಪತ್ರಕರ್ತರೊಬ್ಬರನ್ನು ಬಂಧಿಸಿದ್ದಾರೆ. ಗ್ರೇಟರ್ ಕಾಶ್ಮೀರ್ ಇಂಗ್ಲಿಷ್ ಪತ್ರಿಕೆಯ ಇರ್ಫಾನ್ ಅಮೀನ್ ಮಾಲಿಕ್ ಬಂಧನಕ್ಕೊಳಗಾದ ವ್ಯಕ್ತಿ. ಮನೆಯಿಂದ ಅವರನ್ನು ಬಂಧಿಸಿ ಪೊಲೀಸರು ಕರೆದುಕೊಂಡು ಹೋದರು. ಗುರುವಾರ ಬೆಳಗ್ಗೆ ಅವರ ಮನೆಯವರು ಠಾಣೆಗೆ ಬಂದು ಇರ್ಫಾನ್‍ರನ್ನು ಭೇಟಿ ಮಾಡಿದ ನಂತರ  ಶ್ರೀನಗರದ ಮೀಡಿಯಾ ಫೆಸಿಲಿಟೇಶನ್ ಸೆಂಟರ್‍‌ಗೆ ಬಂದು ಮಾಹಿತಿ ನೀಡಿದ್ದಾರೆ.

ಪುಲ್ವಾಮದ ತ್ರಾಲ್‍ನಲ್ಲಿ ಸೇನೆ ಶೋಧನೆ ನಡೆಸುತ್ತಿದೆ. ಬಂಧನದ ಕಾರಣ ತಿಳಿಸಲಾಗಿಲ್ಲ ಎಂದು ತಂದೆ-ತಾಯಿ ತಿಳಿಸಿದರು. ಸಿಆರ್‌ಪಿಎಫ್ ರಾತ್ರಿ ಮನಗೆ ಬಂದು ಇರ್ಫಾನ್ ಮಾಲಿಕ್‍ರನ್ನು ತಮ್ಮ ಜೊತೆ ಬರಲು ಹೇಳಿತು ಎಂದು ಮನೆಯವರು ಹೇಳಿದರು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೆ ವಿಧಿ ರದ್ದು ಪಡಿಸಿದ ಬಳಿಕ ಬಂಧಿಸಲಾದ ಪ್ರಥಮ ಪತ್ರಕರ್ತ ಇರ್ಫಾನ್ ಮಾಲಿಕ್(26 ವರ್ಷ)ಆಗಿದ್ದಾರೆ.