ಚಿಕಿತ್ಸೆ ಕೊಡಿಸದೆ ಮಂತ್ರವಾದಿಯ ಬಳಿಗೆ ಕರೆದು ಕೊಂಡು ಹೋದ ಹೆತ್ತವರು: ಮೂಢನಂಬಿಕೆಗೆ ಎಂಟು ವರ್ಷದ ಬಾಲಕನ ಸಾವು!

0
710

ವೆಂಜಾರಮೂಡ್(ಕೇರಳ),ಮೇ 11: ಹೆತ್ತವರು ಚಿಕಿತ್ಸೆ ಕೊಡಿಸುವ ಬದಲು ಮಂತ್ರವಾದಿಯ ಬಳಿಗೆ ಕರೆದು ಕೊಂಡು ಹೋದ ಮಣಿಕಂಠ, ರೀನಾ ದಂಪತಿಯ ಎಂಟು ವರ್ಷದ ಪುತ್ರ ಅಭಿಷೇಕ್ ಮೃತಪಟ್ಟಿದ್ದಾನೆ. ಸಾವಿಗೆ ಹುಚ್ಚು ನಾಯಿ ಕಡಿತ ಕಾರಣವೆನ್ನಲಾಗಿದೆ. ತಲಾಲ್ ಎಲ್‍ಪಿ ಸ್ಕೂಲ್‍ನ ನಾಲ್ಕನೆ ತರಗತಿಯ ವಿದ್ಯಾರ್ಥಿಯಾದ ಅಭಿಷೇಕ್ ಬುಧವಾರ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದ. ಆದರೆ ‘ಪೀಡೆ ಮೈ ಮೇಲೆ ಬಂದಿದೆ’ ಎಂದು ಹೆತ್ತವರು ಮಂತ್ರವಾದಿಯ ಹತ್ತಿರ ಕರೆದುಕೊಂಡು ಹೋಗಿದ್ದರು. ಮಂತ್ರವಾದಿ ಮಂತ್ರಿಸಿ ಕೊಟ್ಟ ನೂಲನ್ನು ಬಾಲಕನಿಗೆ ಕಟ್ಟಲಾಗಿತ್ತು. ಮರುದಿವಸ ಬಾಲಕ ಹೆಚ್ಚು ಅಸ್ವಸ್ಥನಾದ ಮೇಲೆ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿಂದ ಜ್ವರಕ್ಕೆ ಮದ್ದನ್ನು ತೆಗೆದು ಕೊಂಡು ಬಂದರು. ಆದರೆ ಗುರುವಾರ ಬಾಲಕ ತೀವ್ರ ಅನಾರೋಗ್ಯ ಗೊಂಡಿದ್ದು ಮಗುವನ್ನು ಪುನಃ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಬಾಲಕನಿಗೆ ಹುಚ್ಚು ನಾಯಿ ಕಡಿದಿರಬಹುದು. ಕೂಡಲೇ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲು ಹೇಳಿದರು. ಆದರೆ ಅಲ್ಲಿಗೆ ಕರದುಕೊಂಡು ಹೋಗುವ ಬದಲು ಹೆತ್ತವರು ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ 1:30ಕ್ಕೆ ಬಾಲಕ ಮೃತಪಟ್ಟನು. ಆದರೆ ಬಾಲಕನ ಮನೆಗೆ ಭೇಟಿ ನೀಡಿದ ಸ್ಥಳೀಯ ಪಂಚಾಯತ್ ಅಧ್ಯಕ್ಷ ಮತ್ತು ಇತರರು ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.