ಕಾರು ಢಿಕ್ಕಿ ಹೊಡೆದು ಆಂಬುಲೆನ್ಸ್ ಗೆ ಬೆಂಕಿ -ವೀಡಿಯೊ

0
545

ಕೊಲ್ಲಂ, ಜು. 10: ಕಲ್ಲುಂತಾಯಂ ಬೈಪಾಸ್ ಜಂಕ್ಷನ್‍ನಲ್ಲಿ ಆಂಬುಲೆನ್ಸ್ ಕಾರು ಢಿಕ್ಕಿಯಾಗಿದ್ದು ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಆಂಬುಲೆನ್ಸ್ ಬೆಂಕಿ ಹಿಡಿದು ಸುಟ್ಟುಹೋಗಿದೆ. ಆಂಬುಲೆನ್ಯೂಸ್ ನಲ್ಲಿದ್ದವರು ಗಾಯಗೊಂಡಿದ್ದು ಹೆಚ್ಚಿನ ಹಾನಿಯಾಗಿಲ್ಲ. ಬುಧವಾರ ಬೆಳಗ್ಗೆ 4: 30ಕ್ಕೆ ಘಟನೆ ನಡೆದಿದೆ.

ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಿಂದ ಕೊಲ್ಲಂ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ಆಂಬುಲೆನ್ಸ್ ಕರೆದುಕೊಂಡು ಹೋಗುತ್ತಿತ್ತು. ಢಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ತಲೆಕೆಳಗಾಗಿ ಬಿದ್ದಿದೆ. ಆಂಬುಲೆನ್ಸ್ ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಆಂಬುಲೆನ್ಸ್ ಗೆ ಬೆಂಕಿ ಹಿಡಿಯಿತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರೂ ಡೀಸೆಲ್ ಟ್ಯಾಂಕ್‍ಗೆ ಬೆಂಕಿ ಬಿದ್ದುದರಿಂದ ಆಂಬುಲೆನ್ಸ್ ಸಂಪೂರ್ಣ ಸುಟ್ಟು ಹೋಗಿದೆ.

കൊല്ലം ബൈപ്പാസിൽ കല്ലുംതാഴം ജംഗ്ഷനിൽ അഗ്​നിക്കിരയാവുന്ന ആംബുലൻസ്​

കൊല്ലം ബൈപ്പാസിൽ കല്ലുംതാഴം ജംഗ്ഷനിൽ കാറുമായി കൂട്ടിയിടിച്ച്​ മറിഞ്ഞതിനെ തുടർന്ന്​ അഗ്​നിക്കിരയാവുന്ന ആംബുലൻസ്

Posted by Madhyamam on Tuesday, July 9, 2019