ಹಕ್ಕಿ ಜ್ವರ: ಒಂದೇ ದಿನದಲ್ಲಿ 23,830 ಸಾಕು ಹಕ್ಕಿಗಳ ಹತ್ಯೆ: ಧನ ಸಹಾಯ ಘೋಷಿಸಿದ ಕೇರಳ ಸರಕಾರ

0
633

ಸನ್ಮಾರ್ಗ ವಾರ್ತೆ

ತಿರುನಂತಪುರಂ,ಜ.6: ಹಕ್ಕಿ ಜ್ವರ ಹರಡಿರುವ ಹಿನ್ನೆಲೆಯಲ್ಲಿ ಸಾಕು ಹಕ್ಕಿಗಳನ್ನು ನಾಶಪಡಿಸಿದ ರೈತರಿಗೆ ಆರ್ಥಿಕ ಸಹಾಯವನ್ನು ಕೇರಳ ಸರಕಾರ ಘೋಷಿಸಿದ್ದು, ಮೊದಲ ದಿನವೇ 23,830 ಹಕ್ಕಿಗಳನ್ನು ಹತ್ಯೆ ಮಾಡಲಾಗಿದೆ.

ಕೋಟ್ಟಯಂ, ಆಲಪ್ಪುಝ ಜಿಲ್ಲೆಗಳಲ್ಲಿ ಹಕ್ಕಿ ಜ್ವರದಿಂದಾಗಿ ಹೆಚ್ಚು ನಷ್ಟ ಆಗಿದೆ. ಈ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ದೃಢಗೊಂಡಿದ್ದು ರೋಗ ಬಾಧೆ ವರದಿಯಾದ ಪ್ರದೇಶಗಳಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಎಲ್ಲ ಹಕ್ಕಿಗಳನ್ನು ಕೊಂದು ಹಾಕಲು ತೀರ್ಮಾನಿಸಲಾಗಿದೆ.

ಕೋಳಿ, ಬಾತುಕೋಳಿ ಮುಂತಾದ ಮಾಂಸಾಹಾರದ ಹಕ್ಕಿಗಳಿಗೆ ಎರಡು ತಿಂಗಳಿಗಿಂತ ಕಡಿಮೆಯ ವಯಸ್ಸಿನದ್ದಾಗಿದ್ದು ಕೊಂದು ಹಾಕುವ ಹಕ್ಕಿಗಳಿಗೆ ತಲಾ ನೂರು ರೂಪಾಯಿ ಮತ್ತು ಎರಡು ತಿಂಗಳಿಗಿಂತ ಹೆಚ್ಚು ವಯಸ್ಸಿರುವ ಹಕ್ಕಿಗಳಿಗೆ 200ರೂಪಾಯಿಯಂತೆ ಸರಕಾರದ ಧನಸಹಾಯ ಘೋಷಣೆಯಾಗಿದೆ. ಒಂದು ಮೊಟ್ಟೆಗೆ ಐದು ರೂಪಾಯಿಯಂತೆ ಧನಸಹಾಯ ನೀಡಲಾಗುವುದು. ಆದರೆ, ಸರಕಾರದ ಧನ ಸಹಾಯ ಕಡಿಮೆಯಾಗಿದೆ ಎಂದು ಸಾಕಣೆದಾರರು ಹೇಳುತ್ತಿದ್ದಾರೆ.