ಕೇರಳ ಪ್ರವಾಹ ಪೀಡಿತರ ನೆರವಿಗೆ 5 ಕೋಟಿ ರೂ ಸಂಗ್ರಹಿಸಲು ತೆಲಂಗಾಣ ಜಮಾಅತ್ ಗುರಿ

0
1156

ಹೈದರಾಬಾದ್: ಕೇರಳ ನೆರೆ ಪೀಡಿತರ ನೆರವಿಗಾಗಿ ಕಳೆದ ಶುಕ್ರವಾರದಂದು ಮಸೀದಿಯಲ್ಲಿ ಒಂದು ಕೋಟಿ ರೂಪಾಯಿ ಸಂಗ್ರಹಿಸಿದ್ದ ಜಮಾಅತೆ ಇಸ್ಲಾಮೀ ತೆಲಂಗಾಣವು ಇದೀಗ 5 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ಜಮಾಅತೆ ಇಸ್ಲಾಮೀ ಹಿಂದ್ ನ ವಿವಿಧ ರಾಜ್ಯವಾರು ಘಟಕಗಳು ಕೇರಳ ನೆರೆ ಪೀಡಿತರ ನೆರವಿಗೆ ವಿವಿಧ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದು ಈಗಾಗಲೇ ಮಾಧ್ಯಮಗಳಲ್ಲಿ ಬಿತ್ತರಿಸಲ್ಪಟ್ಟಿದೆ. ಕೇಂದ್ರ ಸರಕಾರವು ಮಾನವೀಯತೆಯನ್ನು ಬದಿಗೆ ತಳ್ಳಿ ವಿದೇಶಿ ದೇಣಿಗೆಗಳನ್ನು ತಿರಸ್ಕರಿಸಿರವುದರಿಂದ ಕೇರಳ ರಾಜ್ಯದ ಚೇತರಿಕೆಗಾಗಿ ಹಲವು ರೀತಿಯಲ್ಲಿ ಪರಿಹಾರ ಧನ ಸಂಗ್ರಹ ಕಾರ್ಯಗಳು ಭರದಿಂದ ಸಾಗುತ್ತಿವೆ.
ಈಗಾಗಲೇ ಹಲವಾರು ಸಂಘ ಸಂಘಟನೆಗಳು ಕೇರಳಿಯರು ಬೀಫ್ ತಿನ್ನುತ್ತಾರೆಂದು ಸಹಾಯ ಹಸ್ತ ಚಾಚಲು ಹಿಂದಡಿಯಿರಿಸಿರುವುದರ ಕುರಿತು ಜಮಾಅತ್ ಖಂಡಿಸಿದ್ದು ಇಂತಹ ಮನಸ್ಥಿತಿಯು ಸಮಾಜದ ಒಳತಿಗೆ ಉತ್ತಮವಾದುದಲ್ಲ ಎಂದಿದೆ.
ಜಮಾಅತೆ ಇಸ್ಲಾಮೀ ಹಿಂದ್ ‘DARE’ ಎಂಬ ಹೆಸರಿನಲ್ಲಿ ಕೇರಳ ನೆರೆ ಪೀಡಿತರ ವೈದ್ಯಕೀಯ ನೆರವುಗಳಿಗಾಗಿ ವೈದ್ಯರನ್ನು ಕಳುಹಿಸಿದೆ. ಇದಲ್ಲದೇ ಜನರ ಸೇವಾ ಕಾರ್ಯಗಳಿಗೆ ಮುಂದಡಿ ಇಡಲು ಬಯಸುವ ದಾನಿಗಳು ಹೈದರಾಬಾದಿನ ಚಟ್ಟಾಬಜಾರ್ ನಲ್ಲಿರುವ ಜಮಾಅತೆ ಇಸ್ಲಾಮೀ ಕೇಂದ್ರ ಕಛೇರಿಯನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.