ಅನ್ಯಧರ್ಮಗಳನ್ನು ಅವಹೇಳನ ಮಾಡುವ ಭಾಷಣಗಳಿಂದ ವಿದ್ವಾಂಸರು ದೂರವಿರಬೇಕು: ಕೇರಳ ಜಮ್‍ಇಯ್ಯತ್ತುಲ್ ಉಲೇಮ

0
198

ಕಲ್ಲಿಕೋಟೆ, ಜೂ. 12: ಇತರ ಧರ್ಮಗಳನ್ನು ಅವಹೇಳನ ಮಾಡುವ ಭಾಷಣಗಳನ್ನು ಮತಪಂಡಿತರು ಮಾಡಬಾರದು ಎಂದು ಕೇರಳ ಜಮ್‍ಇಯ್ಯುತುಲ್ ಉಲೇಮಾ ರಾಜ್ಯ ಕಾರ್ಯಕಾರಿ ಸಮಿತಿ ಆಗ್ರಹಿಸಿದೆ. ಇಸ್ಲಾಮೀ ದರ್ಶನದ ಪ್ರಾಯೋಗಿಕತೆ, ಸೌಂದರ್ಯ, ಮೂಲಭೂತ ತತ್ವಗಳನ್ನು ಸಮಾಜದ ಮಧ್ಯೆ ಮಂಡಿಸಲು ಇತರ ಧರ್ಮಗಳನ್ನು ಅವಹೇಳನ ಮಾಡುವುದು ತೀರ ಖಂಡನೀಯವಾಗಿದೆ. ಕೆಲವು ಧರ್ಮಬೋಧಕರು ಇಂತಹ ತಪ್ಪು ಅಭ್ಯಾಸವನ್ನು ಹೊಂದಿದದ್ದಾರೆ. ಸಮಾಜದಲ್ಲಿ ಛಿದ್ರತೆ, ಒಡಕು ಸೃಷ್ಟಿಸುವುದು ಮತಪಂಡಿತರಿಗೆ ಒಪ್ಪುವ ವಿಚಾರವಲ್ಲ. ಧರ್ಮ ಬೋಧಕರ ಮೂಲಕ ಸಂತೋಷ, ಶಾಂತಿ ಸೃಷ್ಟಿಯಾಗಬೇಕಾಗಿದೆ. ದ್ವೇಷ ಸೃಷ್ಟಿಸುವ ಭಾಷಣದಿಂದ ದೂರ ನಿಲ್ಲಬೇಕು ಎಂದು ಎಲ್ಲ ಧರ್ಮ ಬೋಧಕರೊಂದಿಗೆ ಜಮ್‍ಇಯ್ಯತ್ತುಲ್ ಉಲೇಮಾ ಆಗ್ರಹಿಸಿದೆ.

ಅನ್ಯ ಧರ್ಮ ದ್ವೇಷ ಬೆಳೆಸಿದರೆ ತೀವ್ರ ಚಿಂತನಾಗತಿ ಹುಟ್ಟಿಕೊಳ್ಳುತ್ತದೆ. ತೀವ್ರ ಚಿಂತನಾಗತಿಯವರಿಗೆ ಉಪದೇಶಿಸಿಬೇಕು. ಧರ್ಮಬೋಧನಾ ಕ್ಷೇತ್ರದಲ್ಲಿ ಸಹಿಷ್ಣುತೆ, ಸಹವರ್ತಿತ್ವವನ್ನು ಮಾದರಿಯಾಗಿ ಸ್ವೀಕರಿಸಬೇಕಾಗಿದೆ ಎಂಬ ಮಕ್ಕ ವಿದ್ವಾಂಸರ ಸಮ್ಮೇಳನದ ಠರಾವನ್ನು ಜಮ್‍ಇಯ್ಯುತ್ತುಲ್ ಉಲೇಮಾ ಸ್ವಾಗತಿಸಿತು.

ಮುಂದಿನ ಆರು ವರ್ಷದ ಚಟುವಟಿಕೆಗಳಿಗೆ ರೂಪು ನೀಡಲಾಯಿತು. ಕೇರಳ ಜಮ್‍ಇಯ್ಯತ್ತುಲ್ ಉಲೇಮಾ ಅಧ್ಯಕ್ಷರಾಗಿ ಮಾಜಿ ಫತ್ವಾ ಬೋರ್ಡ್ ಚೇರ್‍ಮೆನ್ ಪಿ. ಹಂಝ ಬಾಖವಿಯವರನ್ನು ಆಯ್ಕೆಮಾಡಲಾಯಿತು. ಮುಹ್ಯುದ್ದೀನ್ ಉಮರಿಯವರ ನಿಧನನದಿಂದ ತೆರವಾದ ಸ್ಥಾನಕ್ಕೆ ಹಂಝ ಬಾಖವಿಯರು ಆಯ್ಕೆಯಾದರು. ಕೆಜೆಯು ಉಪಾಧ್ಯಕ್ಷ ಟಿಪಿ ಅಬ್ದುಲ್ಲಕೋಯ ಮದನಿ ಅಧ್ಯಕ್ಷತೆ ವಹಿಸಿದರು. ಕೆ.ಜೆ.ಯು ಕಾರ್ಯದರ್ಶಿ ಎಂ. ಮುಹಮ್ಮದ್ ಮದನಿ, ಕೆಎನ್‍ಎಂ ಪ್ರಧಾನ ಕಾರ್ಯದರ್ಶಿ ಪಿಪಿ ಉಣ್ಣೀನ್ ಕುಟ್ಟಿಮೌಲವಿ, ಹಂಝ ಬಾಖಲವಿ, ಪಿಪಿ ಮುಹಮ್ಮದ್ ಮದನಿ, ಕೆ.ಸಿ. ಮುಹಮ್ಮದ್ ಮೌಲವಿ, ಅಬ್ದುರ್ರಹ್ಮಾನ್ ಮದನಿ ಪಾಲಂ, ಈಸಾ ಮದನಿ, ಕೆ. ಮಾಯಿನ್‍ಕುಟ್ಟಿ ಸುಲ್ಲಮಿ, ಎಂಟಿ ಅಬ್ದುಸಮ್ಮದ್ ಸುಲ್ಲಮಿ, ಟಿ.ಪಿ ಅಬ್ದುರ್ರಝಾಕ್ ಬಾಕವಿ, ಮುಹಮ್ಮದ್ ಸಲೀಮ್ ಸುಲ್ಲಮಿ, ಎನ್. ಮುಹಮ್ಮದ್ ಅಲಿ ಅನ್ಸಾರಿ ಮಾತಾಡಿದರು.

LEAVE A REPLY

Please enter your comment!
Please enter your name here