ಬಾಲಕಿಯ ಮೇಲೆ ಅತ್ಯಾಚಾರ: ಇಮಾಮ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲು

0
1301

ತಿರುವನಂತಪುರಂ ಫೆ.12: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಇಮಾಮ್‍ವೊಬ್ಬರ ವಿರುದ್ಧ ಪೊಕ್ಸೊ ಕೇಸು ದಾಖಲಿಸಿಕೊಳ್ಳಲಾಗಿದೆ. ಕೇರಳದ ತೊಳಿಕ್ಕೊಡ್ ಜಮಾಅತ್‍ನ ಮಾಜಿ ಇಮಾಮ್ ಶಫೀಕ್ ಅಲ್ ಖಾಸ್ಮಿಯ ವಿರುದ್ಧ ಪೊಕ್ಸೊ ಕಾನೂನಿನಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. ಜಮಾಅತ್ ಅಧ್ಯಕ್ಷರ ದೂರಿನಲ್ಲಿ ವಿದುರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವು ದಿವಸಗಳ ಹಿಂದೆ ಘಟನೆ ನಡೆದಿದ್ದು ಸ್ಥಳೀಯ ಶಾಲೆಯಿಂದ ಮರಳಿದ್ದ ವಿದ್ಯಾರ್ಥಿನಿಯನ್ನು ಶಫೀಕ್ ಅಲ್ ಖಾಸ್ಮಿ ಪುಸುಲಾಯಿಸಿ ತನ್ನ ಕಾರಿನಲ್ಲಿ ಕಾಡಿದ್ದಲ್ಲಿಗೆ ಕರೆದುಕೊಂಡು ಹೋಗಿದ್ದನು. ಕಾರು ಒಂದು ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುವುದನ್ನು ನೋಡಿದ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು ವಾಹನವನ್ನು ತಡೆದಿದ್ದರು. ನಂತರ ಇಮಾಮ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದನು.