ಅಮೆರಿಕ ಉತ್ತರ ಕೊರಿಯದ ಪ್ರಧಾನ ಶತ್ರು: ಅಧ್ಯಕ್ಷ ಕಿಮ್ ಜೊಂಗ್ ಉನ್

0
127

ಸನ್ಮಾರ್ಗ ವಾರ್ತೆ

ಸೋಲ್,ಜ.9: ಅಮೆರಿಕ ಪ್ರಧಾನ ಶತ್ರುವೆಂದು ಉತ್ತರ ಕೊರಿಯದ ಅಧ್ಯಕ್ಷ ಕಿಮ್ ಜೊಂಗ್ ಉನ್ ಘೋಷಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಜೊ ಬೈಡನ್ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ ನಡೆಸುವ ವೇಳೆ ಕಿಮ್ ಜೊಂಗ್ ಉನ್‍ರಿಂದ ಘೋಷಣೆ ಹೊರ ಬಂದಿದೆ. ಆರಂಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಮ್ ಪರಸ್ಪರ ಶತ್ರುಗಳಾಗಿ ಘೋಷಿಸಿದ್ದರು. ವಾಗ್ಯುದ್ಧ ಮತ್ತು ಪರಸ್ಪರ ಬೆದರಿಕೆ ಹಾಕಿ ಇಬ್ಬರೂ ಮುಂದೆ ಸಾಗಿದ್ದರು.

ಹೀಗಿದ್ದರೂ ಟ್ರಂಪ್-ಉನ್ ಪರಸ್ಪರ ಚರ್ಚೆಗೆ ಮತ್ತು ಮೊದಲ ಬಾರಿ ಉತ್ತರ ಕೊರಿಯ ಸಂದರ್ಶನಕ್ಕೆ ಟ್ರಂಪ್ ಸಿದ್ಧರಾಗಿದ್ದರು.
ನಮ್ಮ ಕ್ರಾಂತಿಗೆ ದೊಡ್ಡ ಅಡಚಣೆಯಾಗಿರುವ ದೊಡ್ಡ ಶತ್ರು ಅಮೆರಿಕವಾಗಿದ್ದು ಅದನ್ನು ಬುಡಮೇಲುಗೊಳಿಸುವತ್ತ ಗಮನ ಕೇಂದ್ರೀಕರಿಸಬೇಕಾಗಿದೆ ಎಂದು ಕೊರಿಯದ ವರ್ಕಸ್ ಪಾರ್ಟಿ ಕಾಂಗ್ರೆಸ್‍ನಲ್ಲಿಕಿಂ ಹೇಳಿದರೆಂದು ಕೆಸಿಎನ್‍ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಲ್ಲಿ ಯಾರು ಅಧಿಕಾರದಲ್ಲಿ ಕೂರುವುದು ಮುಖ್ಯವಲ್ಲ. ಉತ್ತರ ಕೊರಿಯದ ವಿರುದ್ಧ ಅಮೆರಿಕದ ನೀತಿಯ ನಿಜವಾದ ಸ್ವಭಾವ ಯಾವತ್ತೂ ಬದಲಾಗುವುದಿಲ್ಲ ಎಂದು ಜೋ ಬೈಡನ್‍ರ ಹೆಸರನ್ನು ಉಲ್ಲೇಖಿಸದೆ ಕಿಮ್ ಹೇಳಿದರು. ಅಮೆರಿಕದಲ್ಲಿ ಆಡಳಿತ ಬದಲಾವಣೆ ಪೊಂಗ್ಯಾಂಗ್‍ನಲ್ಲಿಯೂ ಪ್ರತಿಫಲನವಾಗಲಿದೆ. ಚುನಾವಣೆಯ ಮೊದಲು ಜೊ ಬೈಡನ್‍ರನ್ನು ಕ್ರೂರಿ, ನಾಯಿ ಎಂದು ಕಿಮ್ ಹೇಳಿದ್ದರು. ಕಿಮ್ ಅನ್ನು ಕಳ್ಳ, ಕಟುಕ ಎಂದು ಬೈಡನ್ ಕರೆದಿದ್ದರು.