ಕಿಸೆಯಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಗೆ ರಕ್ತದ ಕಲೆ ಅಂಟಿರುವಾಗ ಅದೇ ಕಿಸೆಯಲ್ಲಿದ್ದ ಬಸ್ ಟಿಕೆಟ್ ಏಕೆ ಶುಭ್ರವಾಗಿದೆ? ವಿಚಾರಣೆಯ ವೇಳೆ ನ್ಯಾಯವಾದಿ

0
428

ವಿದ್ಯಾ ಮುಂಬೈ

ಕನ್ನಡಕ್ಕೆ: ಆಯಿಶತುಲ್ ಅಫೀಫ 

ಮೂಲ: ಇಂಡಿಯಾ ಟುಡೇ

 ಸೊಹ್ರಾಬುದ್ದೀನ್ ಶೇಖ್ ಮತ್ತು ಇತರರ ಎನ್ಕೌಂಟರ್ ನಕಲಿ ಎಂದು ಮುಂಬೈ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಸಿಬಿಐಯು ತನ್ನ ಅಂತಿಮ  ವಾದವನ್ನು ಮಂಡಿಸಿದೆ.

 2005 ರಲ್ಲಿ ರಾಜಸ್ಥಾನ ಮತ್ತು ಗುಜರಾತ್ ಪೊಲೀಸ್ ಜಂಟಿ ತಂಡದಿಂದ ಸೊಹ್ರಾಬುದ್ದೀನ್ ಕೊಲ್ಲಲ್ಪತ್ತಿದ್ದನು. ಅವನ  ಹತ್ತಿರದ ಸಹಾಯಕ ತುಳಸಿರಾಮ್ ಪ್ರಜಾಪತಿ 2006 ರಲ್ಲಿ ಕೊಲ್ಲಲ್ಪಟ್ಟನು.   ಈ ಎರಡೂ ಎನ್ಕೌಂಟರ್ ಗಳು ನಕಲಿ ಎಂದು ಸಿಬಿಐ ಹೇಳಿದೆ.

ಎನ್ಕೌಂಟರ್ ನಕಲಿ ಎಂಬುಬುದಾಗಿ  ನ್ಯಾಯಾಲಯಕ್ಕೆ ನೀಡಲಾದ ಸಾಕ್ಷ್ಯಾಧಾರದಲ್ಲಿ ತಿಳಿಸಲಾಗಿದೆ  ಎಂದು ಸಿಬಿಐಯನ್ನು ಪ್ರತಿನಿಧಿಸುವ ಸಾರ್ವಜನಿಕ ನ್ಯಾಯವಾದಿ  ಬಿಪಿ ರಾಜು ಹೇಳಿದರು.

ಸೊಹ್ರಾಬುದ್ದೀನ್ ಎನ್ಕೌಂಟರ್ ಬಗ್ಗೆ ಮಾತನಾಡಿದ ರಾಜು, ಸೊಹ್ರಾಬುದ್ದೀನ್ ಗೆ  ಲಷ್ಕರ್-ಇ-ತೊಯ್ಬಾ ಮತ್ತು ಐಎಸ್ಐಯೊಂದಿಗೆ ಸಂಪರ್ಕವಿದೆ ಮತ್ತು ಆತ  “ದೊಡ್ಡ ರಾಜಕೀಯ ನಾಯಕ” ನನ್ನು  ಹತ್ಯೆ ಮಾಡಲು ಬಂದಿದ್ದಾನೆ  ಎಂದು ರಾಜಸ್ಥಾನ ಪೊಲೀಸ್ ನ ಹಿರಿಯ ಇನ್ಸ್ ಪೆಕ್ಟರ್ ಆರೋಪ ಮಾಡಿದ್ದರು.

ಆದರೆ, ಉದಯಪುರ ಪೊಲೀಸರ ಜಿಲ್ಲಾ ವಿಶೇಷ ಶಾಖೆಯ ಉಪ-ಇನ್ಸ್ ಪೆಕ್ಟರ್ ಕುಂಬ್ ಸಿಂಗ್ ಇಂತಹ ಮಾಹಿತಿ ಪಡೆದಿರುವುದನ್ನು ನಿರಾಕರಿಸಿದರು .

 ಮಾಹಿತಿಯ ಮೂಲವನ್ನು ಕಂಡುಹಿಡಿಯಲು ತನಿಖೆ ಮಾಡಿಲ್ಲವೇ  ಎಂದು ನ್ಯಾಯಾಧೀಶ ಎಸ್.ಜೆ. ಶರ್ಮಾ ಕೇಳಿದರು.

ಎನ್ಕೌಂಟರ್ ಸಮಯದಲ್ಲಿ ಸೊಹ್ರಾಬುದ್ದೀನ್ ಕಿಸೆಯಿಂದ ಪಡೆಯಲಾಗಿದೆಯೆಂದು  ಪೊಲೀಸರು ಹೇಳಿದ್ದ ಟಿಕೆಟ್ ನಲ್ಲಿ   ರಕ್ತದ  ಕಲೆ ಇಲ್ಲ ಎಂಬುದು  ಪ್ರಾಸಿಕ್ಯೂಷನ್ ನ ಗಮನಸೆಳೆಯಿತು. ಸೊಹ್ರಾಬುದ್ದೀನ್ ಕಿಸೆಯಿಂದ  ವಶಪಡಿಸಲಾದ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ  ವಸ್ತುಗಳು ರಕ್ತದ ಕಲೆಯನ್ನು ಹೊಂದಿರುವಾಗ ,ಟಿಕೆಟ್ (ಅಹ್ಮದಾಬಾದ್ ನಿಂದ ಸೂರತ್ ಗೆ )ನ್ನು ನಿಜವಾಗಿಯೂ ಕಿಸೆಯಿಂದ ವಶಪಡಿಸಲಾಗಿದೆಯೇ ಎಂಬ ಬಗ್ಗೆ ಸಂದೇಹವಿತ್ತು.

ಟಿಕೆಟ್ “ಇರಿಸಲಾಗಿದೆ ” ಎಂದು ನ್ಯಾಯವಾದಿ ಬಿಪಿ ರಾಜು ವಾದಿಸಿದಾಗ, ಅದರ ಬಗ್ಗೆ 38 ಆರೋಪಿಗಳನ್ನು ಸಿಬಿಐ ಪ್ರಶ್ನಿಸಿದೆಯೆ ಎಂದು ನ್ಯಾಯಾಲಯ ಕೇಳಿತು.

ಸೊಹ್ರಾಬುದ್ದೀನ್ ಜೀವಕ್ಕೆ  ಕನಿಷ್ಠ ನಾಲ್ಕು ಮಂದಿ ಬೆದರಿಕೆಯೊಡ್ಡಿದ್ದಾರೆ ಎಂದು ಉಲ್ಲೇಖಿಸಿ,  ಸೂರತ್ ನಿಂದ  ಸೊಹ್ರಾಬುದ್ದೀನ್ ಬರುತ್ತಿದ್ದಾನೆ ಎಂಬ ಪೋಲೀಸ್ ಹೇಳಿಕೆಯನ್ನು ಸಮರ್ಥಿಸಿಸುವ  ಕರೆ ದಾಖಲೆಗಳ (ಸಿಡಿಆರ್) ಅಲಭ್ಯತೆಯನ್ನು ರಾಜು ಗಮನ ಸೆಳೆದರು. ಎನ್ಕೌಂಟರ್ ಸಮಯದಲ್ಲಿ ಸೊಹ್ರಾಬುದ್ದೀನ್ ಹೊಂದಿದ್ದ ಬೈಕಿನ ಬಗ್ಗೆಯಾಗಲಿ,  ಬೈಕು ನೀಡಿರುವ ವ್ಯಕ್ತಿಯ ಬಗ್ಗೆಯಾಗಲಿ  ಉತ್ತರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ರಾಜು ಹೇಳಿದರು.

ತುಳಸೀರಾಮ್ ಪ್ರಜಾಪತಿಯನ್ನು ಕೊಂದ  2006 ರ ಎನ್ಕೌಂಟರ್ ಕೂಡ ಪೂರ್ವ ಆಯೋಜಿತವೆಂದು  ನ್ಯಾಯವಾದಿ  ಬಿಪಿ ರಾಜು ವಾದವನ್ನು  ಮಂಡಿಸಿದರು. ಪ್ರಜಾಪತಿಯು  ಸೊಹ್ರಾಬುದ್ದೀನ್ ನ ನಿಕಟ ಸಹಾಯಕನಾಗಿದ್ದ.

ತುಳಸೀರಾಮ್ ಪ್ರಜಾಪತಿ ಮೆಣಸಿನ ಪುಡಿಯನ್ನು ಬಳಸಿ ತಪ್ಪಿಸಿಕೊಂಡಿದ್ದಾನೆ  ಎಂಬುವುದರಲ್ಲಿ ಹುರುಳಿಲ್ಲ . ತುಳಸೀರಾಮ್ ನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಹೇಳಲಾದ  ನಾಡ ಪಿಸ್ತೂಲಿನಲ್ಲಿ  ಅವನ ಬೆರಳಚ್ಚು  ಸಿಕ್ಕಿಲ್ಲ ಎಂದು ಅವರು ವಾದಿಸಿದರು.

“ಆತ  ಒಂದು ವರ್ಷದವರೆಗೆ ಬಂಧನದಲ್ಲಿದ್ದ,  ನವೆಂಬರ್ 27, 2006 ರಂದು ತಪ್ಪಿಸಿಕೊಂಡ  ಮತ್ತು ನವೆಂಬರ್ 28 ರ ಬೆಳಗ್ಗೆ ಕೊಲ್ಲಲ್ಪಟ್ಟ. ಅವನು ಓಡುತ್ತಿದ್ದಾಗ ಅವನಿಗೆ ಪಿಸ್ತೂಲ್ ಸಿಗುವುದು ಅಸಾಧ್ಯವಾಗಿದೆ” ಎಂದು ರಾಜು ಹೇಳಿದರು.

ಆರೋಪಿಗಳನ್ನು ಪ್ರತಿನಿಧಿಸುವ ವಕೀಲರು ತಮ್ಮ ವಾದಗಳನ್ನು ಪ್ರಾರಂಭಿಸಿದ್ದಾರೆ. ಕೆಲವೇ ದಿನಗಳಲ್ಲಿ  ತೀರ್ಮಾನ ಪ್ರಕಟವಾಗಬಹುದು.