ಕೊಲ್ಕತ್ತಾ ರ‌್ಯಾಲಿ ಮುಸ್ಲಿಂ ಭಾವನೆಗೆ ಸ್ಪಂದಿಸಲು ವಿಫಲವಾಗಿದೆ: ಅಝಮ್ ಖಾನ್

0
620

ವರದಿ :ಏ ಏನ್ ಐ

ಕೋಲ್ಕತಾದಲ್ಲಿ ಇತ್ತೀಚೆಗೆ ನಡೆದ ಟಿಎಂಸಿ ನೇತೃತ್ವದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗವಹಿಸಿದ್ದ ಬೃಹತ್ ಪ್ರತಿರೋಧ ರ‌್ಯಾಲಿಯು ಮುಸ್ಲಿಂ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾಗಿದೆಯೆಂದು ಪಕ್ಷದ ಹಿರಿಯ ನಾಯಕ ಅಝಮ್ ಖಾನ್ ಹೇಳಿದ್ದಾರೆ.

“ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯದಿಂದ ಕಾಶ್ಮೀರದ ಒಬ್ಬ ಮತ್ತು ಅಸ್ಸಾಂನ ಇನ್ನೊಬ್ಬ ನಾಯಕ ಮಾತ್ರ ರ‌್ಯಾಲಿ ಯಲ್ಲಿ ಭಾಗವಹಿಸಿದ್ದರು. ಮುಸ್ಲಿಮರು ತಮ್ಮ ಪ್ರಾತಿನಿಧ್ಯತೆ ಬಗ್ಗೆ ಚಿಂತಿತರಾಗಿದ್ದಾರೆ” ಎಂದು ಖಾನ್ ಹೇಳಿದರು.

ದೇಶದ ಪ್ರಗತಿಗೆ ಸಹಾಯ ಮಾಡಬಹುದಾದ ಸಮಸ್ಯೆಗಳ ಬಗ್ಗೆ ಮಾತನಾಡಲು ವಿಫಲವಾದ ಮತ್ತು ಕೇವಲ ರಾಜಕೀಯನ್ನೇ ಅವಲಂಬಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕರನ್ನು ಸಮಾಜವಾದಿ ಪಕ್ಷದ ಮುಖಂಡರು ಪ್ರಶ್ನಿಸಿದ್ದಾರೆ.

“ಈ ರ‌್ಯಾಲಿಯು ತಲುಪಿಸಲೇ ಬೇಕಾದ ಸಂದೇಶವನ್ನು ತಲುಪಿಸುವಲ್ಲಿ ವಿಫಲವಾಗಿದೆ. ರಾಜಕೀಯ ಸಮಸ್ಯೆಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಯಿತು ಮತ್ತು ಭವಿಷ್ಯದಲ್ಲಿ ರಾಷ್ಟ್ರವನ್ನು ಎಲ್ಲಿಗೆ ಮತ್ತು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ಯಾವುದೇ ಚರ್ಚೆಯಿರಲಿಲ್ಲ” ಎಂದು ಖಾನ್ ಹೇಳಿದರು.