ಕೊನೆಗೂ ಎಚ್ಚೆತ್ತ ಪಾಕ್: ಭಯೋತ್ಪಾದಕ ಗುಂಪಿನ ಆಸ್ತಿ, ನಿಧಿಗಳಿಗೆ ನಿಯಂತ್ರಣ ಹೇರಿ ಆದೇಶ

0
390

ಹೊಸದಿಲ್ಲಿ, ಮಾ.5: ಪುಲ್ವಾಮಾ ಪ್ರಕರಣದ ಬಳಿಕ ಜಗತ್ತಿನ ಕೆಂಗಣ್ಣಿಗೆ ಗುರಿಯಾದ ಪಾಕಿಸ್ತಾನವು ಇದೀಗ ತನ್ನನ್ನು ಸರಿಪಡಿಸುವ ಪ್ರಯತ್ನಕ್ಕಿಳಿದಂತಿದೆ. ಅದರ ಭಾಗವೆಂಬಂತೆ, ವಿಶ್ವಸಂಸ್ಥೆ ಭದ್ರತಾ ಸಮಿತಿ ನಿಷೇಧಿಸಿದ ಭಯೋತ್ಪಾದನಾ ಸಂಘಟನೆಗಳ ಆಸ್ತಿಗಳನ್ನು ಪಾಕ್ ಸರಕಾರ ಮುಟ್ಟುಗೂಲು ಹಾಕಿಕೊಂಡಿದೆ. ಅದರ ಬ್ಯಾಂಕ್‍ ಖಾತೆಗಳನ್ನು ಸ್ತಂಭನ ಗೊಳಿಸಿದೆ ಎಂದು ಪಾಕಿಸ್ತಾನ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.

ಯುಎನ್‍ಸಿ(ಮುಟ್ಟುಗೋಲು, ಸ್ತಂಭನ) ಆದೇಶ 2019ರ ಪ್ರಕಾರ ನಾಮ ನಿರ್ದೇಶಿತ ವ್ಯಕ್ತಿಗಳ ವಿರುದ್ಧ ವಿಶ್ವಸಂಸ್ಥೆಯ ನಿರ್ಬಂಧವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಹೇಳಿಕೆ ನೀಡಿದೆ.

ವಿಶ್ವಸಂಸ್ಥೆ ಭದ್ರತಾ ಸಮಿತಿ ಸೂಚಿತ ಯುಎನ್‍ಸಿ ಆದೇಶದ ಪ್ರಕಾರ ಅದು ನಿಷೇಧ ಹೇರಿದ ಸಂಘಟನೆಗಳ ಚಟುವಟಿಕೆಗಳಿಗೆ ಪಾಕಿಸ್ತಾನ ಸರಕಾರ ನಿಯಂತ್ರಣ ಹೇರಿದೆ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯದ ವಕ್ತಾರ ಡಾ. ಮುಹಮ್ಮದ್ ಫೈಝಲ್ ಡಾನ್ ನ್ಯೂಸ್ ಟಿವಿಗೆ ತಿಳಿಸಿದರು.

ನಿಷೇಧಿತ ಸಂಘಟನೆಗಳ ಚ್ಯಾರಿಟಿ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೂ ಪಾಕಿಸ್ತಾನ ಸರಕಾರ ನಿಯಂತ್ರಣ ವಿಧಿಸಿದೆ ಎಂದು ಅವರು ಹೇಳಿದರು.