ಕೃಷ್ಣ ಜನ್ಮಾಷ್ಟಮಿ ಮೆರವಣಿಗೆಯಲ್ಲಿ ನಾರೇ ತಕ್ಬೀರ್ ಘೋಷಣೆ:ಹಿಂದು-ಮುಸ್ಲಿಮರಿಂದ ಪರಸ್ಪರರಿಗೆ ಸಿಹಿ ಹಂಚಿ ಸಂಭ್ರಮ

1
637

ನವದೆಹಲಿ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾದ ಮೆರವಣಿಗೆಯಲ್ಲಿ ‘ನಾರೆ ತಕ್ಬೀರ್’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ಘಟನೆಯು ಬಡಾ ಹಿಂದು ರಾವ್ ಮಸ್ಜಿದ್ ಬಳಿ ನಡೆದಿದ್ದು, ರ‌್ಯಾಲಿಯಲ್ಲಿದ್ದ ಹಿಂದು ಯುವಕರು ಮತ್ತು ಹಿರಿಯರು ಮಸೀದಿಯ ವ್ಯಾಪ್ತಿ ಪ್ರದೇಶದಲ್ಲಿ ತಲುಪಿದಾಗ ನಾರೆ ತಕ್ಬೀರ್ ಘೋಷಣೆಯನ್ನು ಕೂಗಿದರೆಂದು ತಿಳಿದು ಬಂದಿದೆ.

ಆರಂಭದಲ್ಲಿ ಮೆರವಣಿಗೆಯು ಮಸೀದಿ ಹತ್ತಿರ ಬರುವಾಗ ಅಲ್ಲಿದ್ದ ಮುಸ್ಲಿಮರು ಘೋಷವಾಕ್ಯ ಕೂಗುತ್ತಿದ್ದರೆಂದು ಭಾವಿಸಲಾಗಿತ್ತಾದರೆ; ತದನಂತರ ಮೆರವಣಿಗೆಯಲ್ಲಿದ್ದ ಹಿಂದುಗಳು ನಾರೇ ತಕ್ಬಿರ್ ಘೋಷವಾಕ್ಯವನ್ನು ಕೂಗುತ್ತಾ ಸಾಗಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಈ ಹಿಂದೆ ಧಾರ್ಮಿಕ ಪ್ರದೇಶಗಳ  ಬಳಿ ಉದ್ರೇಕಕಾರಿ ಭಾಷಣಗಳನ್ನೂ ಘೋಷಣೆಗಳನ್ನೂ ಎಷ್ಟೋ ಪ್ರದೇಶದಲ್ಲಿ ಕೂಗಿರುವ ಕುರಿತು ಹಲವಾರು ವರದಿಗಳು ಪ್ರಕಟಗೊಂಡಿವೆಯಾದರೆ ಈ ಘಟನೆಯು ಪರಸ್ಪರ ಧರ್ಮೀಯರ ನಡುವೆ ಸೌಹಾರ್ದತೆಗೆ ಮಾದರಿಯಾಗಿದೆ. ಸಾಮಾಜಿಕ‌ ಕಾರ್ಯಕರ್ತರಾದ ಸಯೀದ್ ಖಾನ್ ರವರು ಮೆರವಣಿಗೆಯ ಕುರಿತು ಹರ್ಷ ವ್ಯಕ್ತಪಡಿಸಿದರು. ಇದಲ್ಲದೇ ಆಝಾದ್ ಮಾರ್ಕೆಟ್ ವ್ಯಾಪ್ತಿ ಪ್ರದೇಶದಲ್ಲಿ ಹಿಂದು-ಮುಸ್ಲಿಮ್ ಧರ್ಮ ಬಾಂಧವರು ಪರಸ್ಪರರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

1 COMMENT

Comments are closed.