ಕೆ-ಸೆಟ್ ಪರೀಕ್ಷೆ: ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ಶಬಾನಾ ಉಪನ್ಯಾಸಕಿಯಾಗಿ ಆಯ್ಕೆ

0
1848

ಪುತ್ತೂರು: ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕಳೆದ ಡಿಸೆಂಬರ್ ನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ‌ ಅರ್ಹತಾ ಪರೀಕ್ಷೆ(ಕೆ-ಸೆಟ್)ಯ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ ಶಬಾನಾ ಪಿ. ಯವರು ಉಪನ್ಯಾಸ ವೃತ್ತಿಗೆ ಆಯ್ಕೆಯಾಗಿ, ಸಾಧನೆಗೈದಿದ್ದಾರೆ.

ಈ ವಿಶಿಷ್ಟವಾದ ಸಾಧನೆಯನ್ನು ಮಾಡಿದ ಶಬಾನಾರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಈಕೆ ಗೋಳಿತೊಟ್ಟು ನಿವಾಸಿ ಹಮೀದ್ . ಪಿ.‌ ಹಾಗೂ ಆಮಿನಮ್ಮ ದಂಪತಿಗಳ ಸುಪುತ್ರಿ. ವಿದ್ಯಾರ್ಥಿ ಜೀವನದ ಕೊನೆಯ ಭಾಗದಲ್ಲಿ ಕೆ-ಸೆಟ್ ಪರೀಕ್ಷೆ ಯನ್ನು ಪಾಸಾಗುವ ಮೂಲಕ ಉಪನ್ಯಾಸ ವೃತ್ತಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿನಿ ಶಬಾನಾ ಈ ಸಾಧನೆ ಮಾಡಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಲಿಯೋ ನೊರೋನ್ಹಾ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ರೆ.ಫಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ವಿಭಾಗ ಸಂಯೋಜಕ ಪ್ರೊ.ದಿನಕರ್ ರಾವ್, ಪ್ರಾಧ್ಯಾಪಕರಾದ ಡಾ.ಮಂಜುಳಾ ಬಿ.ಸಿ., ಸಂಧ್ಯಾ. ಎಚ್, ಪ್ರದೀಪ್ ಕೆ.ಎಸ್ ಮತ್ತು ಮಹಿತಾ ಕುಮಾರಿ ಎಂ. ಹಾಜರಿದ್ದರು.