ಕುವೈಟ್: ಐದೂವರೆ ಲಕ್ಷ ವಿದೇಶಿಯರ ಡ್ರೈವಿಂಗ್ ಲೈಸೆನ್ಸ್ ರದ್ದು!

0
783

ಕುವೈಟ್ ಸಿಟಿ,ಮೇ 24: ಕುವೈಟ್‍ನಲ್ಲಿ 5,38,000 ವಿದೇಶೀಯರ ಚಾಲನಾ ಪರವಾನಿಗೆ ರದ್ದು ಪಡಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.ಮಾತ್ರವಲ್ಲದೇ, ವಿದೇಶಿಯರಿಗೆ ಲೈಸೆನ್ಸ್ ಕೊಡುವುದಕ್ಕೆ ಇರುವ ನಿಬಂಧನೆಗಳನ್ನು ಕಠಿಣಗೊಳಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದಿಂದ ಗಡಿಪಾರು ಮಾಡಿದವರು, ಊರಿಗೆ ಖಾಯಂ ಆಗಿ ಹೋದವರು. ಕಾನೂನುಬದ್ಧವಾಗಿ ಲೈಸೆನ್ಸ್ ಪಡೆಯದವರ ಲೈಸೆನ್ಸ್ ರದ್ದು ಆಗುತ್ತಿದೆ. ಈಗ ಕುವೈಟ್‍ನಲ್ಲಿ ಸ್ವದೇಶಿ, ವಿದೇಶಿಯರು ಸಏರಿ 13,60000 ಮಂದಿ ಲೈಸೆನ್ಸ್ ಹೋಲ್ಡರ್‌ಗಳಿದ್ದು ಇವರಲ್ಲಿ 6,22,764 ಮಂದಿ ಸ್ವದೇಶಿಗಳು, ಲೈಸೆನ್ಸ್ ಪಡೆದ ವಿದೇಶಿಯರ ಸಂಖ್ಯೆ7,38,404 ಆಗಿದೆ. ದ್ವಿಚಕ್ರ ವಾಹನ ಪರವಾನಿಗೆ ಪಡೆದವರ ಸಂಖ್ಯೆ ಇದರಲ್ಲಿ ಸೇರಿಲ್ಲ. ಹೊಸ ಲೈಸೆನ್ಸ್ ಕೊಡುವ ಮತ್ತು ಈಗ ಇರುವುದನ್ನು ನವೀಕರಿಸಲು ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ವೇಳೆ ಕಾನೂನು ಉಲ್ಲಂಘಿಸಿ ಲೈಸೆನ್ಸ್ ಪಡೆದಿದ್ದರೆ ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿತು. ಇದಕ್ಕೆಂದೇ ಪ್ರತ್ಯೇಕ ಪರಿಶೀಲನೆ ನಡೆಯುತ್ತದೆ ಎಂದು ಸಚಿವಾಲಯ ಹೇಳಿದೆ.