ಪೌರತ್ವ ಮಸೂದೆ: ಕೇರಳದ ಮುಅಲ್ಲಿಮೀನ್‍ನಿಂದ ಪ್ರತಿಭಟನಾ ಸಮ್ಮೇಳನ

0
801

ಸನ್ಮಾರ್ಗ ವಾರ್ತೆ-

ಕೊಲ್ಲಂ (ಕೇರಳ), ಡಿ. 12: ಪಾರ್ಲಿಮೆಂಟು ಮತ್ತು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸಾಗಿದ್ದು ದಕ್ಷಿಣ ಕೇರಳ ಲಜ್‍ನತ್ತುಲ್ ಮುಅಲ್ಲಿಮೀನ್ ಸಂಘಟನೆ ಪ್ರತಿಭಟನಾ ರಾಲಿ ಮತ್ತು ಸಾರ್ವಜನಿಕ ಸಮ್ಮೇಳನ ನಡೆಸಿತು. ಕೊಲ್ಲಂನ ಸಮ್ಮೇಳನದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಜಾತ್ಯತೀತತೆಗೆ ಛೂರಿ ಇರಿದ ಪೌರತ್ವ ತಿದ್ದು ಪಡಿ ಮಸೂದೆಯನ್ನು ವಿರೋಧಿಸಿ ಪ್ರಸ್ತಾವ ಪಾಸು ಮಾಡಲಾಗಿದೆ. ಕೊಲ್ಲಂ ಆಶ್ರಮ ಎಂಬಲ್ಲಿಂದ ಪಿರಂಗಿ ಮೈದಾನದಕ್ಕೆ ರಾಲಿ ಸಾಗಿತು. ಪೌರತ್ವ ತಿದ್ದು ಪಡಿ ಮಸೂದೆ ದೇಶದಲ್ಲಿ ಕೋಮು ಗಳ ನಡುವೆ ಗೋಡೆಯನ್ನು ಸೃಷ್ಟಿಸಲಾಗುತ್ತಿದೆ. ಎರಡನೆ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರಚೋದಿಸುತ್ತಿದೆ ಎಂದು ದಕ್ಷಿಣ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಅಧ್ಯಕ್ಷ ಚೆಲಕ್ಕೂಳಂ ಕೆ.ಎಂ ಮುಹ್ಮದ್ ಅಬುಲ್ ಬುಷ್ರಾ ಮೌಲವಿ ಹೇಳಿದರು. ದಕ್ಷಿಣ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಮಸೂದೆಯ ವಿರುದ್ಧ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ.