ನಿಂಬೆಹಣ್ಣಿನ ಹುಡುಗ & ಬಸ್ ಕಂಡಕ್ಟರ್…

0
253

ಸನ್ಮಾರ್ಗ ವಾರ್ತೆ

ಇರ್ಷಾದ್ ವೇಣೂರ್

ನನ್ನ ದೈನಂದಿನ ಬದುಕಿನ ಸಹೋದ್ಯೋಗಿ ನನ್ನ ಬೈಕ್ ಕಳೆದೊಂದು ವಾರದಿಂದ ಕೈಕೊಡುತ್ತಿದ್ದುದರಿಂದ ಬಹಳ ಸಮಯದ ಬಳಿಕ ಮಂಗಳೂರಿನ ಸಿಟಿ ಬಸ್ ಹತ್ತಿದೆ. ಬಸ್ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಿಂತಾಗ, ನಿಂಬೆಹಣ್ಣು ಮಾರುತ್ತಿದ್ದ ಅಪ್ರಾಪ್ತ ವಯಸ್ಸಿನ ಹುಡುಗನೋರ್ವ ಕಣ್ಣಿಗೆ ಬಿದ್ದ. ನಾನು ಬಸ್‌ನ ಕಿಟಕಿ ಬದಿಯಲ್ಲಿದ್ದುದರಿಂದ ಎಷ್ಟು ಅಂತ ಕೇಳಿದೆ. ಒಂದು ಕಟ್ಟು ನಿಂಬೆಹಣ್ಣಿಗೆ 20₹ ಅಂದ. ಖರೀದಿಸಿದೆ.

ನನ್ನ ಬಳಿ ಇದ್ದ ಬಸ್ ಕಂಡಕ್ಟರ್ ನೋಡಿ‌…
“ಪಾಪ..ಎಲ್ಯ ಜೋಕುಲೆನ ಒಂಜಿ ಅವಸ್ಥೆ ತೂಲೆ…ಇಲ್ಲಲ್ ಎತ್ ಬಂಗೊಂಡ…ಏರೆಗ್ ಗೊತ್ತು….ಅಂತ ಆ ಹುಡುಗನ ಪುಟ್ಟ ವ್ಯಾಪಾರದ ಶೈಲಿ ನೋಡಿ ಹೇಳಿದ.

ಪಾಪ.‌‌‌.ಮೊದಲ ಬಾರಿಗೆ ವ್ಯಾಪಾರಕ್ಕೆ ಇಳಿದಿರಬಹುದು ಎಂದು ನನಗೂ ಎಂದೆನಿಸಿತು. ಯಾಕೆಂದರೆ ಹುಡುಗ ಮೆಲುದನಿಯಲ್ಲಿ ಇಪ್ಪತ್….ಇಪ್ಪತ್ತು….ಅಂತ ಹೇಳ್ತಿದ್ದ.

ಒಂದು ಸಮಯದಲ್ಲಿ ಪುಟ್ ಬೋರ್ಡ್‌ನಲ್ಲಿ ನೇತಾಡಿಕೊಂಡು ಮಂಗಳೂರಿಗೆ ಬರ್ತಾ ಇದ್ದ ಸಿಟಿ ಬಸ್‌ನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಪ್ರಯಾಣಿಕರಿದ್ದರು…

ಹುಡುಗನ ವ್ಯಾಪಾರಕ್ಕೆ ಮರುಗಿದ ಕಂಡಕ್ಟರ್‌ನನ್ನು ನೋಡಿ. ಆಹ್! ಎಷ್ಟೊಂದು ತಿರುವು ನೀಡಿತು ಕೊರೋನಾ ಬದುಕಿಗೆ ಅಂತನಿಸಿತು…

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here