ಲಿಂಗಾಯತ ಮಠದ ಮುಖ್ಯಸ್ಥರಾಗಿ ಮುಸ್ಲಿಂ ಯುವಕ

0
1262

ಸನ್ಮಾರ್ಗ ವಾರ್ತೆ

ಬೆಂಗಳೂರು, ಫೆ. 21: ಕರ್ನಾಟಕದ ಗದಗದಲ್ಲಿ ಆರಂಭವಾಗಲಿರುವ ಲಿಂಗಾಯತ್ ಮಠದ ಮುಖ್ಯಸ್ಥನಾಗಿ ಮುಸ್ಲಿಮ್ ಯುವಕನನ್ನು ಆಯ್ಕೆಮಾಡಲಾಗಿದ್ದು ಲಿಂಗಾಯತ ಧರ್ಮದ ಬಸವೇಶ್ವರ ಆಶಯಗಳನ್ನು ಗೌರವಿಸುವ ದಿವಾನ್ ಶರೀಫ್ ಮುಲ್ಲ(33) ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಅಸೂತಿ ಗ್ರಾಮದ ಮುರುಗಾ ರಾಜೇಂದ್ರ ಕೊರನೇಶ್ವರ ಶಾಂತಿ ಧರ್ಮ ಮಠದ ಮುಖ್ಯಸ್ಥನಾಗಿ ದಿವಾನ್ ಶರೀಫ್ ಮುಲ್ಲ ಅಧಿಕಾರ ವಹಿಸಿಕೊಳ್ಳಲಿದ್ದು ಮಠ ಇರುವ ಎರಡು ಎಕರೆ ಸ್ಥಳವನ್ನು ದಿವಾನ್ ಶರೀಪ್‍ರ ತಂದೆ ತಾಯಿ ದಾನವಾಗಿ ನೀಡಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಿದ್ದಾರೆ ಯಾರೂ ವಿರೋಧಿಸಿಲ್ಲ ಎಂದು ದಿವಾನ್ ಶರೀಫ್ ಹೇಳಿದರು.

ಸಮುದಾಯ ಯಾವುದು ಎಂಧು ನೋಡದೆ ಮುಖ್ಯಸ್ಥರನ್ನಾಗಿಸುವ ಸಂಪ್ರದಾಯ ಗದಗಿನ ಲಿಂಗಾಯತ ಮಠಕ್ಕಿದೆ ಎಂದು ಕಾಂಗ್ರೆಸ್ ನಾಯಕ ಎಚ್‍ ಕೆ ಪಾಟೀಲ್ ಹೇಳಿದರು. ಬಸವೇಶ್ವರರ ಆಶಯಗಳಲ್ಲಿ ನಂಬಿಕೆ ಇರುವ ಮುಸ್ಲಿಮನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ, ಇದು ಆರೋಗ್ಯಕರ ಬೆಳವಣಿಗೆ ಎಂದು ಪಾಟೀಲ್ ಹೇಳಿದರು.