ಅಡುಗೆ ಅನಿಲ ದರ ಪುನಃ 25 ರೂ. ಏರಿಕೆ; ಮೂರು ತಿಂಗಳಲ್ಲಿ 225 ರೂ. ಹೆಚ್ಚಳ!

0
2913

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಡುಗೆ ಅನಿಲಕ್ಕೆ ನಿರಂತರ ದರ ಹೆಚ್ಚಳವಾಗಿರುವುದು ಪೆಟ್ರೋಲ್, ಡೀಸೆಲ್ ಬೆಲೆಯಿಂದ ತತ್ತರಿಸುವ ಜನರಿಗೆ ದುಪ್ಪಟ್ಟು ಹೊಡೆತ ಬಿದ್ದಿದೆ. ಇಂದು ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಪುನಃ 25 ರೂಪಾಯಿ ಹೆಚ್ಚಳವಾಗಿದೆ. ಮೂರು ತಿಂಗಳಲ್ಲಿ ಒಟ್ಟು 225 ರೂಪಾಯಿ ಹೆಚ್ಚಳವಾಗಿದ್ದು, ಡಿಸೆಂಬರ್ 1 ಮತ್ತು 16 ರಂದು 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಫೆಬ್ರುವರಿಯಲ್ಲಿ ಮೊದಲ ವಾರದಲ್ಲಿ 25ರೂಪಾಯಿ ನಂತರ ಫೆ.14ಕ್ಕೆ 50 ರೂಪಾಯಿ, ಫೆ.25ಕ್ಕೆ 25 ರೂಪಾಯಿ, ಹಾಗೂ ಇಂದು 25 ರೂಪಾಯಿ ಹೆಚ್ಚಳವಾಗಿದೆ.

ಇದೇ ವೇಳೆ , ವಾಣಿಜ್ಯ ಸಿಲಂಡರಿನ ದರ ಭಾರೀ ಹೆಚ್ಚಳವಾಗಿದೆ. 19 ಕಿಲೊ ಭಾರದ ಸಿಲಂಡರಿಗೆ ಇಂದು ನೂರು ರೂಪಾಯಿ ಹೆಚ್ಚಳವಾಗಿದೆ ಆಗಿದೆ. ಸಿಲಿಂಡರಿನ ಬೆಲೆ 1618 ರೂಪಾಯಿ ಆಗಿದೆ. ಫೆಬ್ರುವರಿ ಒಂದಕ್ಕೆ 191 ರೂಪಾಯಿ ಹೆಚ್ಚಿಸಿದರು. ಜನವರಿಯಲ್ಲಿ 17 ರೂಪಾಯಿ ಹೆಚ್ಚಿಸಲಾಗಿತ್ತು. ಡಿಸೆಂಬರಿನಲ್ಲಿ ಎರಡು ಸಲ ವಾಣಿಜ್ಯ ಸಿಲೆಂಡರಿಗೆ ಬೆಲೆ ಹೆಚ್ಚಳವಾಗಿದೆ.

ವಾಣಿಜ್ಯ ಸಿಲಿಂಡರಿನ ದರ ಹೆಚ್ಚಳದಿಂದ ಹೊಟೇಲು, ಉಪಾಹಾರ ಗೃಹ, ಬೃಹತ್ ಉದ್ಯಮಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ. ಈ ವೇಳೆ ಅಡಿಗೆ ಅನಿಲ ಬಳಕೆದಾರರಿಗೆ ಸಬ್ಸಿಡಿಕೊಡಲಾಗುತ್ತಿತ್ತು. ಒಂದು ವರ್ಷದಿಂದ ಈ ಸಬ್ಸಿಡಿ ಕೂಡ ನಿಂತು ಹೋಗಿದೆ. 2019 ಜೂನ್‍ನಲ್ಲಿ ಸಬ್ಸಿಡಿಯ ಎಲ್‍ಪಿಜಿ ಸಿಲಿಂಡರಿಗೆ 497 ರೂಪಾಯಿ ಇತ್ತು. 147 ರೂಪಾಯಿ ಸಬ್ಸಿಡಿ ಬಳಕೆದಾರರಿಗೆ ಕೊಡಲಾಗುತ್ತಿತ್ತು. ಗೋ ಇಲೆಕ್ಟ್ರಿಕ್ ಅಭಿಯಾನವನ್ನು ಉದ್ಘಾಟಿಸುವ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಬ್ಸಿಡಿ ನಿಲ್ಲಿಸುವ ಸೂಚನೆ ನೀಡಿದ್ದರು.