ಅಡುಗೆ ಅನಿಲಕ್ಕೆ ಪುನಃ 25ರೂ. ಹೆಚ್ಚಳ

0
280

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಡಿಗೆ ಅನಿಲದ ಬೆಲೆ ಪುನಃ ಹೆಚ್ಚಳವಾಗಿದೆ. ಗೃಹ ಬಳಕೆದಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದ್ದು, ಸಿಲಿಂಡರಿಗೆ 25 ರೂಪಾಯಿ ಹೆಚ್ಚಿಸಲಾಗಿದೆ. ಈ ತಿಂಗಳು ಮೂರನೇ ಸಲ ಅಡಿಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಾಗಿದ್ದು, ಇದರೊಂದಿಗೆ ಸಿಲಿಂಡರ್‌ಗೆ 2020 ಡಿಸೆಂಬರ್‌ನ ನಂತರ 8೦ ದಿನಗಳೊಳಗೆ 200ರೂಪಾಯಿ ದರ ಹೆಚ್ಚಳವಾಗಿದೆ.

ಈ ತಿಂಗಳು 2ನೇ ತಾರೀಕಿಗೆ 25ರೂಪಾಯಿ ಅಡಿಗೆ ಅನಿಲಕ್ಕೆ ತೈಲ ಕಂಪೆನಿಗಳು ಹೆಚ್ಚಿಸಿದವು. ಮತ್ತೆ 14ನೇ ತಾರೀಕಿಗೆ 50 ರೂಪಾಯಿ ಹೆಚ್ಚಳವಾಗಿತ್ತು, ಇಂದು ಪುನಃ 25 ರೂಪಾಯಿ ಹೆಚ್ಚಳವಾಗಿದೆ. ಬೆಲೆ ಹೆಚ್ಚಳದ ಅನುಪಾತದಲ್ಲಿ ಈ ಹಿಂದೆ ನೂರರಿಂದ ನೂರೈವತ್ತು ರೂಪಾಯಿವರೆಗೆ ಸಬ್ಸಿಡಿ ಸಿಗುತ್ತಿತ್ತು. ಇದು ಈಗ ಸ್ಥಗಿತವಾಗಿದ್ದು, ಇದರ ಬಗ್ಗೆ ಯಾವುದೇ ವಿವರಗಳಿಲ್ಲ.