ಮಾನವರ ಮಾರಾಟ: ಲಿಬಿಯ ಬಂಧನ ಕೇಂದ್ರದ ಗೋಡೆಗಳ ಮೇಲೆ ವಲಸಿಗರ ಭೀತಿಯ ಬರಹಗಳು

0
1292

ಮೂಲ ; ಅಲ್ ಜಝೀರಾ

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಲಿಬಿಯಾದ ಬಂದರು ನಗರವಾದ ಖೊಮ್ಸ್ ನ ಸೌಕ್ ಅಲ್ ಖಮಿಸ್ ನಲ್ಲಿರುವ ವಲಸಿಗರ ಬಂಧನ ಕೇಂದ್ರದ ಗೋಡೆಗಳ ಮೇಲೆ ಎಚ್ಚರಿಕೆಗಳನ್ನು ಗೀಚಲಾಗುತ್ತಿದೆ.

“ಈ ಮನೆಗೆ ಯಾರು ಬರುತ್ತಾರೆ, ದೇವರು ನಿಮಗೆ ಸಹಾಯ ಮಾಡಲಿ,” ಒಬ್ಬನು ಹೇಳುತ್ತಾನೆ, “ಲಿಬಿಯಾ ಮಾನವರ ಮಾರುಕಟ್ಟೆಯಾಗಿದೆ. ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗವು ಎಲ್ಲಿದೆ?” “ಮೂರು ಜನರನ್ನು ಇಲ್ಲಿ ಮಾರಲಾಯಿತು.” ಇಂತಹ ಬರಹಗಳನ್ನು ಗೋಡೆಯಲ್ಲಿ ಕಾಣಬಹುದಾಗಿದೆ.

ನಿರಾಶ್ರಿತರು ಮತ್ತು ವಲಸಿಗರು ಸಾಮಾನ್ಯವಾಗಿ ಸೂಖ್ ಅಲ್ ಖಮಿಸ್ಗೆ ಆಗಮಿಸುತ್ತಾರೆ. ಲಿಬಿಯಾದ ಇಲಾಖೆಯು ಕಾನೂನುಬಾಹಿರ ವಲಸೆ (ಡಿಸಿಐಎಂ) ಯನ್ನು ತಡೆಯುವುದಕ್ಕಾಗಿ ನಡೆಸುತ್ತಿರುವ ಕೇಂದ್ರ ಇದು. ಇಟಲಿಗೆ ಹೋಗಲು ಮೆಡಿಟರೇನಿಯನ್ ಸಮುದ್ರವನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸಿದವರನ್ನು ತಡೆ ಹಿಡಿದು ಇಲ್ಲಿಗೆ ಕರೆತರಲಾಗುತ್ತದೆ.ಈ ಪ್ರಕಾರವಾಗಿ ಫೆಬ್ರವರಿ 2017 ರಿಂದ ಹತ್ತು ಸಾವಿರ ಜನರು ಲಿಬಿಯಾಗೆ ಮರಳಿದ್ದಾರೆ, ಲಿಬ್ಯಾ ಸರಕಾರದೊಂದಿಗೆ ಇಟಲಿಯು ಇಂಥದ್ದೊಂದು ತಡೆ ಒಪ್ಪಂದವನ್ನು ಮಾಡಿಕೊಂಡಿದೆ.

ವಿಶ್ವಸಂಸ್ಥೆ ಈ ಒಪ್ಪಂದವನ್ನು “ಅಮಾನವೀಯ” ಎಂದು ಖಂಡಿಸಿದೆ ಮತ್ತು “ಲಿಬಿಯಾದಲ್ಲಿ ಬಂಧಿಸಲ್ಪಟ್ಟ ವಲಸಿಗರ ನೋವು ಮಾನವೀಯತೆಯ ಆತ್ಮಸಾಕ್ಷಿಯ ಒಂದು ಆಕ್ರೋಶ” ಎಂದು ಹೇಳಿದೆ.

ಲಿಬಿಯಾ ಕಡಲ ತೀರದಿಂದ ಸೆರೆಹಿಡಿಯಲ್ಪಟ್ಟ ನಿರಾಶ್ರಿತರು ಮತ್ತು ವಲಸಿಗರು ಸಾಮಾನ್ಯವಾಗಿ ಆಅIಒ ನಡೆಸುವ ಬಂಧನ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿಗೆ ಬಂಧಿಸಲ್ಪಡುತ್ತಾರೆ.

ಸೂಕ್ ಅಲ್ ಖಮಿಸ್ ಬಂಧನ ಕೇಂದ್ರದಲ್ಲಿ ಲಿಬಿಯಾದ ಕಾವಲುಗಾರರು ಕಳ್ಳಸಾಗಣೆ ಗುಂಪುಗಳಿಗೆ ವಲಸಿಗರನ್ನು ಮಾರಾಟ ಮಾಡಿರುವ ಅನೇಕ ವರದಿಗಳನ್ನು ಅಲ್ ಜಜೀರಾ ವರದಿ ಮಾಡಿದೆ. ಡಿಸೆಂಬರ್ 7 ರಂದು ಕೇಂದ್ರದಿಂದ ಬಲವಂತವಾಗಿ ಐವರು ಬಂಧಿತರನ್ನು ಒಯ್ದ ನಂತರ ಸೂಕ್ ಅಲ್ ಖಮಿಸ್ ನ ಪರಿಸ್ಥಿತಿಯು ಉಲ್ಬಣಗೊಂಡಿದೆ.

“ಮೊದಲು ಕೆಲವು ವ್ಯಕ್ತಿಗಳು ಬಂದರು, ನೀವು ಬಿಡುಗಡೆ ಬಯಸುತ್ತೀರಾ ಎಂದು ಅವರು ಕೇಳಿದರು, ಆದರೆ ನಾವು ಇಲ್ಲ ಎಂದು ಹೇಳಿದೆವು … ನಂತರ ಕೆಲವು ಇತರ ವ್ಯಕ್ತಿಗಳು ಬಂದು ಕೆಲಸ ಮಾಡಲು ಕೆಲವರನ್ನು ಕಳಿಸುವಂತೆ ಪೊಲೀಸ್ ಸಿಬ್ಬಂದಿಯನ್ನು ಕೇಳಿದರು … ನಂತರ ಅವರು ಅವರನ್ನು ಕದ್ದೊಯ್ದರು , “ಒಂದು ಎರಿಟ್ರಿಯನ್ ಬಂಧಿತ ಹೇಳಿದ ಪ್ರಕಾರ .ಕದ್ದೊಯ್ದವರಲ್ಲಿ ಮೂವರು ಸೋಮಾಲಿಗಳು, 15 ಮತ್ತು 21 ವಯಸ್ಸಿನವರು ಮತ್ತು 16 ವರ್ಷದ ಎರಿಟ್ರಿಯಾನ್ ಸೇರಿದ್ದಾರೆ.

ಖೊಮ್ಸ್ ನ ನಿರಾಶ್ರಿತರು ಮತ್ತು ವಲಸಿಗರು ಕಾಣೆಯಾದ ಜನರನ್ನು ಕಳ್ಳಸಾಗಣೆಗೆ ಮಾರಾಟ ಮಾಡುತ್ತಾರೆಂದು ನಂಬುತ್ತಾರೆ. ಅಂದಿನಿಂದ , ಬಂಧನಕ್ಕೊಳಗಾದವರು ಪ್ರತಿಭಟನೆ ನಡೆಸುತ್ತಿದ್ದಾರೆ, ಮತ್ತು ಅನೇಕ ವಿಡಿಯೊಗಳನ್ನು ಅಲ್ ಜಜೀರಾಗೆ ಅವರು ಕಳುಹಿಸಿದ್ದಾರೆ, , ಆದರೆ ಪ್ರತಿಭಟನೆ ನಿಲ್ಲಿಸದೆ ಹೋದರೆ ಲಿಬಿಯಾ ಕಾವಲುಗಾರರು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ. ಬಂಧನಕ್ಕೊಳಗಾದವರು ಫೋಟೋಗಳು ಮತ್ತು ಅವರು ಎಲ್ಲಿದ್ದಾರೆಂದು ದೃಢೀಕರಿಸಲು ಜಿಪಿಎಸ್ ಮೂಲಕ ಸ್ಥಳವನ್ನು ಕಳುಹಿಸಿದ್ದಾರೆ. ಅವರ ಅವಸ್ಥೆ ದುರುಪಯೋಗದ ವಲಯಗಳನ್ನು ತೋರಿಸುತ್ತದೆ, ಲಿಬಿಯಾದಲ್ಲಿ ಅನೇಕ ನಿರಾಶ್ರಿತರು ಮತ್ತು ವಲಸಿಗರು ಶೋಷಣೆ ಮತ್ತು ಭಯಕ್ಕೊಳಗಾಗಿದ್ದರೆ ,ಅಲ್ಲಿ ಅವರು ಮಾರಾಟವಾಗಬಹುದೆಂದು ಮತ್ತು ಹಲವಾರು ಬಾರಿ ಮರುಮಾರಾಟವಾಗಲೂ ಬಹುದೆಂದು. ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ಮೆಡಿಟರೇನಿಯನ್ ಸಮುದ್ರಡಾ ಮೂಲಕ ಯುರೋಪಿಗೆ ತಪ್ಪಿಸಿಕೊಳ್ಳಲು ಕಾರಣವೇನೆಂಬುವುದನ್ನು ಇದು ತೋರಿಸುತ್ತದೆ. ಕಾನೂನಿನ ಸ್ಥಳಾಂತರಿಸುವಿಕೆ ಮತ್ತು ಪುನರ್ವಸತಿಯ ನಿಧಾನ ಪ್ರಕ್ರಿಯೆಗೆ ತಿಂಗಳುಗಳು ಅಥವಾ ವರ್ಷಗಳ ಕಾಲ ಕಾಯುವ ಬದಲು ಇದು ಅವರ ಏಕೈಕ ಆಯ್ಕೆಯಾಗಿರುತ್ತದೆ.

ವಿಮೋಚನಾ ಪಾವತಿಗಳು

ಸೂಕ್ ಅಲ್ ಖಮೀಸ್ ನಲ್ಲಿ ಉಳಿದಿರುವವರು ಭಯಭೀತರಾಗಿದ್ದಾರೆ. ಬಂಧನದಲ್ಲಿರುವ ಎರಿಟ್ರಿಯನ್ ಯೊಬ್ಬರು ಅಲ್ ಜಝೀರಾಗೆ ದೂರವಾಣಿ ಮೂಲಕ ತಿಳಿಸುತ್ತಾರೆ ಅವರು ಎರಡು ವರ್ಷಕ್ಕೂ ಹೆಚ್ಚಿನ ಕಾಲವನ್ನು ಕಳ್ಳ ಸಾಗಣೆದಾರರೊಂದಿಗೆ ಕಳೆದಿದ್ದಾರೆ ಮತ್ತು ಅವರ ಕುಟುಂಬವು ವಿಮೋಚನಾ ಪಾವತಿಗಳಲ್ಲಿ $ 9,000 ಗಿಂತ ಹೆಚ್ಚಿನ ಹಣವನ್ನು ಪಾವತಿಸಿದೆ. ಅವರು ಡಿಸೆಂಬರ್ 7 ರಂದು ಐವರನ್ನು ಒಯ್ದಂದಿನಿಂದಲೂ ಖೋಮ್ಸ್ ನಿಂದ ದಿನನಿತ್ಯದ ವೀಡಿಯೊ ಮತ್ತು ವಾಟ್ಸಪ್ಪ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಈಗ ಸಾವು ಉತ್ತಮವಾಗಿದೆ , ಯಾರಾದರೂ ನನಗೆ ಪಾವತಿಸಲು ಕೇಳಿದರೆ” ಎಂದು ಅವರು ಹೇಳಿದರು, ಹಣ ಸಂಗ್ರಹಣೆಯಲ್ಲಿ ಅವನ ಕುಟುಂಬವು ಈಗಾಗಲೇ ತಮ್ಮ ಮನೆ ಕಳೆದುಕೊಂಡಿದೆ, ಮತ್ತು ಇನ್ನು ಹೆಚ್ಚಿನದನ್ನು ಪಾವತಿಸಲು ಸಾಧ್ಯವಿಲ್ಲ. “ಅವರು ನಮ್ಮನ್ನು ಕೊಲ್ಲುತ್ತಾರೆ ಅಥವಾ ನಮ್ಮನ್ನು ಯಾರೂ ಪತ್ತೆ ಹಚ್ಚಲು ಸಾಧ್ಯವಿಲ್ಲದ ಸ್ಥಳಕ್ಕೆ (ಅಲ್ಲಿ) ಕೊಂಡೊಯ್ಯುತ್ತಾರೆ ಎಂದು ಕಾವಲುಗಾರರು ಹೆಮ್ಮೆಯಿಂದ ಹೇಳುತ್ತಿದ್ದಾರೆ ” ಎಂದು ಅವರು ಹೇಳಿದರು.

‘ನಾನು ನಿಮಗೆ ಸುಳ್ಳು ಹೇಳುತ್ತಿಲ್ಲ, ಈ ಕೇಂದ್ರವನ್ನು ಸರಕಾರವು ನಡೆಸುತ್ತಿದ್ದೆಯೇ ಇಲ್ಲವೇ ಎಂದು ನನಗೆ ಗೊತ್ತಿಲ್ಲ; ನಾನು ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಹೌದು, ಅವರು ಪೊಲೀಸ್ ಅಧಿಕಾರಿಗಳ ಬಟ್ಟೆಗಳನ್ನು ಧರಿಸುತ್ತಾರೆ ಆದರೆ ಕಳ್ಳಸಾಗಾಣಿಕೆದಾರರಂತೆ ಕೆಲಸ ಮಾಡುತ್ತಿದ್ದಾರೆ, ಅವರು ಹಿಂಸಿಸುತ್ತಾರೆ, ಅಪಹರಿಸುತ್ತಾರೆ, ಕದಿಯುತ್ತಾರೆ, ಹೇಗೆ ಪ್ರತ್ಯೇಕಿಸಲು ಸಾಧ್ಯ?”” ಅವರು ಹೇಳಿದರು.ಬಂದನದಲ್ಲಿರುವಾವರೊಬ್ಬರು ಅಲ್ ಜಝೀರಾಗೆ ಹ್ರಳುತ್ತಾರೆ ಸೌಕ್ ಅಲ್ ಖಮೀಸ್ ನಲ್ಲಿ ಸುಮಾರು 20 ಮಂದಿ ತಮ್ಮನ್ನು ತಾವೇ ಕೊಲ್ಲಲು ಪ್ರಯತ್ನಿಸಿದ್ದಾರೆ, ಆದರೆ ಇತರ ನಿರಾಶ್ರಿತರು ಮತ್ತು ವಲಸಿಗರನ್ನು ಅವರನ್ನು ತಡೆದರು.