ಮಹಾರಾಷ್ಟ್ರ: ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ರಾಜೀನಾಮೆ

0
358

ಸನ್ಮಾರ್ಗ ವಾರ್ತೆ

ಮುಂಬೈ,ನ.8: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ. ಉಸ್ತುವಾರಿ ಸರಕಾರದ ಅವಧಿ ಇಂದಿಗೆ ಕೊನೆಯಾಗಿದ್ದು ರಾಜೀನಾಮೆ ನಂತರ ಹೊಸ ಸರಕಾರ ರಚಿಸಲು ಫಡ್ನವಿಸ್ ಹಕ್ಕು ಮಂಡಿಸಿಲ್ಲ.

ಶಿವಸೇನೆಯೊಂದಿಗೆ ಸಖ್ಯ ಮಾಡುವ ಯತ್ನಗಳೆಲ್ಲವೂ ವಿಫಲವಾದ ಬೆನ್ನಿಗೆ ಫಡ್ನವಿಸ್ ರಾಜೀನಾಮೆ ನೀಡಿದರು. ಫಡ್ನವಿಸ್ ರಾಜೀನಾಮೆ ನೀಡುವುದರೊಂದಿಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ದಾರಿ ಸುಗಮಗೊಂಡಿದೆ.

ಮುಖ್ಯಮಂತ್ರಿ ಸ್ಥಾನ ಬೇಕೆಂದು ಶಿವಸೇನೆ ದೃಢವಾಗಿ ನಿಂತಿದೆ. ಸರಕಾರ ರಚಿಸುವ ಬಿಜೆಪಿಯ ಕನಸು ಕಮರಿದೆ. ಶಿವಸೇನೆ ಜೊತೆಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಬಿಜೆಪಿ ತಯಾರಾಗಿಲ್ಲ.

LEAVE A REPLY

Please enter your comment!
Please enter your name here