ಮಹಾರಾಷ್ಟ್ರದಲ್ಲಿ ಪುನಃ ಬ್ಯಾಲಟ್ ಪೇಪರ್: ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ತೀರ್ಮಾನ

0
759

ಸನ್ಮಾರ್ಗ ವಾರ್ತೆ

ಮುಂಬೈ,ಫೆ.3: ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಗಳಲ್ಲಿ ಬ್ಯಾಲಟ್ ಪೇಪರ್ ಮತಪತ್ರ ಬಳಸಲು ಮಸೂದೆಯನ್ನು ಬಜೆಟ್ ಸಮ್ಮೇಳನದಲ್ಲಿ ಮಂಡಿಸಲಾಗುವುದೆಂದು ಸೂಚನೆಗಳು ಲಭ್ಯವಾಗಿದೆ. ಮಹಾರಾಷ್ಟ್ರ ವಿದಾನಸಭೆಯ ಬಜೆಟ್ ಅಧಿವೇಶನ ಮಾರ್ಚ್‌ ತಿಂಗಳಲ್ಲಿ ಆರಂಭಗೊಳ್ಳಲಿದೆ.

ಮಹಾರಾಷ್ಟ್ರ ಸ್ಪೀಕರ್ ನಾನಾ ಪಟೇಲ್ ಈ ವಿಷಯದ ಕುರಿತು ರಾಷ್ಟ್ರೀಯ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಸೂಚನೆ ನೀಡಿದ್ದು ಇವಿಎಂ ಜೊತೆಗೆ ಬ್ಯಾಲೆಟ್ ಪೇಪರ್ ಅನ್ನು ಕೂಡ ಜಾರಿಗೆ ತರುವ ಮಸೂದೆಯ ಕರಡು ತಯಾರಾಗಿಸಲಾಗಿದೆ ಎಂದು ನಾನಾ ಪಟೇಲ್ ಹೇಳಿದರು.

ರಾಜ್ಯದ ವಿಧಾನಸಭಾ ಚುನಾವಣೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಬ್ಯಾಲೆಟ್ ಪೇಪರ್ ಉಪಯೋಗಿಸಲಾಗುವುದು.

ಸಂವಿಧಾನದ ಆರ್ಟಿಕಲ್ 328 ಪ್ರಕಾರ ಈ ವಿಷಯದಲ್ಲಿ ಕಾನೂನು ತರಲು ಸಾಧ್ಯವಿದೆ ಎಂದು ಚುನಾವಣಾ ಆಯೋಗದೊಂದಿಗೆ ಚರ್ಚಿಸಲಾಗಿದೆ ಎಂದು ಸ್ಪೀಕರ್ ಹೇಳಿದರು. ಮಹಾ ವಿಕಾಸ್ ಅಗಾಡಿ ಸರಕಾರದ ಪಾರ್ಟಿಗಳಾದ ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಬ್ಯಾಲೆಟ್ ಪೇಪರ್ ಚುನಾವಣೆಯನ್ನು ಬೆಂಬಲಿಸುತ್ತಿದೆ.