ಮಹಾರಾಷ್ಟ್ರ ಸರ್ಕಾರದಿಂದ  ಗೋ ಸೇವಾ ಆಯೋಗ ಸ್ಥಾಪನೆಗೆ ಕರಡು ಸಿದ್ಧ 

0
908

ಮಹಾರಾಷ್ಟ್ರ: ಅಕ್ರಮ ಜಾನುವಾರು  ವಧೆ ತಡೆಗಟ್ಟುವ ದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರವು ಗೋ ಸೇವಾ ಆಯೋಗವನ್ನು ಸ್ಥಾಪಿಸಲು ಕರಡು ಮಸೂದೆಯನ್ನು ಸಿದ್ಧಪಡಿಸಿದೆ.ರಾಜ್ಯದಲ್ಲಿ ಸ್ಥಳೀಯ ಮಟ್ಟದಲ್ಲಿನ ಹಸುಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸಲು ಮತ್ತು  ಗೋಶಾಲಾಗಳ ಕಾರ್ಯಚಟುವಟಿಕೆಗಳ ಕುರಿತು ನಿಗಾವಹಿಸಲು ಈ ಕರಡನ್ನು ರಚಿಸಲಾಗಿದೆ ಎಂದು ತಿಳಿಸಿದೆ. ಇದಲ್ಲದೆ ಆಯೋಗವು   ಹಸುವಿನ ಹಾಲು, ಮೂತ್ರ ಮತ್ತು ಸೆಗಣಿಗಳಿಂದ ವಿದ್ಯುತ್ ಮತ್ತು ಜೈವಿಕ ಅನಿಲವನ್ನು ಉತ್ಪಾದಿಸಲು, ಕೈಗಾರಿಕೆಗಳನ್ನು ಸ್ಥಾಪಿಸಲು  ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಿಕೊಡಬೇಕು ಎಂದು ಹೇಳಿಕೊಂಡಿದೆ.

ಸರಕಾರಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಹೇಳಿಕೆಯಂತೆ; ಪಶು ಸಂಗೋಪನಾ ಮಂತ್ರಿಯ ನೇತೃತ್ವದಲ್ಲಿ ಪ್ರಸ್ತಾವಿತ ಆಯೋಗವು ಸರಕಾರಿ ಅಧಿಕಾರಿಗಳು ಹಾಗು ಸ್ಥಳೀಯ ಸ್ವಯಂ ಸೇವಕರನ್ನು ಒಳಗೊಂಡಂತೆ  23 ಸದಸ್ಯರನ್ನು  ಹೊಂದಿದೆ ಎಂದಿದ್ದಾರೆ. “ಪೊಲೀಸರು ಕಸಾಯಿಖಾನೆಗೆ ಸಾಗಿಸಲಾಗುತ್ತಿರುವುದಾಗಿ ಶಂಕಿಸಿ ವಶಕ್ಕೆ ಪಡೆದುಕೊಂಡ ಹಸುಗಳ ಸಂರಕ್ಷಣೆಯ ಹೊಣೆಯು ಆಯೋಗದ ಮೇಲಿರುತ್ತದೆ.

1995ರ  ಮಹಾರಾಷ್ಟ್ರ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಕಾಯಿದೆ ಮತ್ತು 1960 ರ ದಿ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್ ಆಕ್ಟ್  ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಆಯೋಗವು ಕಾರ್ಯ ನಿರ್ವಹಿಸುತ್ತದೆ. ಮೊದಲ ಅಪರಾಧಕ್ಕೆ50,000 ರೂ. ಮತ್ತು ಎರಡನೆಯ  ಅಪರಾಧಕ್ಕಾಗಿ  ರೂ. 1 ಲಕ್ಷ ರೂ  ದಂಡವನ್ನು ವಿಧಿಸಲು ಆಯೋಗಕ್ಕೆ  ಅಧಿಕಾರವಿದೆ ಎಂಬುದು ಆಯೋಗದ ನಿರ್ಬಂಧನೆಗಳಾಗಿವೆ.

ಕಳೆದ ವರ್ಷ ಪ್ರಸ್ತಾವನೆಯ ಕುರಿತು ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರಾದರೂ  “ನಾವು ಶೀಘ್ರದಲ್ಲೇ ನಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲಿದ್ದೇವೆ. ಹರಿಯಾಣ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಇದೇ ರೀತಿಯ ಆಯೋಗದ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡಿದ ನಂತರ ಆಯೋಗದ ಕಲ್ಪನೆಯನ್ನು ಸೂಚಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿಗಳು ತಿಳಿಸಿದ್ದಾರೆ.

” ಹಾಲು, ಮೂತ್ರ ಮತ್ತು ಸಗಣಿಗಳಿಂದ ಶಕ್ತಿ ಮತ್ತು ಜೈವಿಕ ಅನಿಲವನ್ನು ಉತ್ಪಾದಿಸಲು ಯೋಜನೆಗಳನ್ನು ಸೂಚಿಸುವ ಯೋಜನೆಗಳನ್ನು ಹೊರತುಪಡಿಸಿ, ಇದು ಆರ್ಥಿಕವಾಗಿ ದುರ್ಬಲವಾದ ಗೌಶಾಲಾಗಳಿಗೆ ಹೊಸ ವೈಜ್ಞಾನಿಕ ತಂತ್ರಜ್ಞಾನಗಳನ್ನು ಮತ್ತು ಹಣಕಾಸಿನ ಸಹಾಯವನ್ನು ಒದಗಿಸಲು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಲಿದೆ” ಎಂದು ತಿಳಿಸಲಾಗಿದೆ.

ಆಯೋಗವು ಮೇಯಿಸುವಿಕೆ, ಭೂಮಿ ಉತ್ಪಾದನೆಯನ್ನು ಹೆಚ್ಚಿಸಲು, ಹಾಗೂ ಅಭಿವೃದ್ಧಿಪಡಿಸಲು ಮತ್ತು ಸ್ಥಳೀಯ ಹಸುಗಳ ಹಾಲು ಉತ್ಪಾದನೆ, ಸಂತಾನೋತ್ಪತ್ತಿಗೆ ಪ್ರೋತ್ಸಾಹಿಸಲು ಕೆಲಸ ಮಾಡುತ್ತದೆ ಎಂದು ಸೂಚಿಸಲಾಗಿದೆ. “ಗೌಶಾಲಾಗಳು ಅಥವಾ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಯಸುವ  ಯಾವುದೇ ಸಂಘಟನೆಗಳು  ಆಯೋಗದೊಂದಿಗೆ ತಮ್ಮನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ, ಆಯೋಗವು ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡಲಿದ್ದು, ವಾರ್ಷಿಕ ಲೆಕ್ಕಾಕಾರವನ್ನು  ನಡೆಸುವ ಮತ್ತು  ಲೋಪದೋಷಗಳು ಕಂಡುಬಂದಲ್ಲಿ  ಸಂಸ್ಥೆಗಳ ವಿರುದ್ಧ ಕ್ರಮ  ತೆಗೆದುಕೊಳ್ಳುವ ಅಧಿಕಾರ ಆಯೋಗಕ್ಕಿದೆ. ಒಟ್ಟಿನಲ್ಲಿ “ಆಯೋಗವು  ರಾಜ್ಯದ ಹಸುಗಳ ರಕ್ಷಣೆ ಮತ್ತು ಅಭಿವೃದ್ಧಿಯನ್ನು  ಖಚಿತಪಡಿಸುತ್ತದೆ” ಎಂದು  ಹೇಳಿಕೊಂಡಿದೆಯಾದರೆ ಕಾದು ನೋಡಬೇಕಿದೆ.