ಎಸ್.ಐ.ಓ.‌ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಾರಾಷ್ಟ್ರದ ಸಲ್ಮಾನ್ ಅಹ್ಮದ್ ಆಯ್ಕೆ

0
428

ಸನ್ಮಾರ್ಗ ವಾರ್ತೆ

ವಿಜಯವಾಡ: ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್.ಐ.ಓ)ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಾರಾಷ್ಟ್ರದ ಮುಹಮ್ಮದ್ ಸಲ್ಮಾನ್ ಅಹ್ಮದ್ ಆಯ್ಕೆಯಾಗಿದ್ದಾರೆ.

ವಿಜಯವಾಡದಲ್ಲಿ 2021-22 ನೇ ಸಾಲಿಗೆ ನಡೆದ ಅಖಿಲ ಭಾರತ ಮಟ್ಟದ ರಾಜ್ಯ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಸಲ್ಮಾನ್ ಅಹ್ಮದ್ ಕಳೆದ ಸಾಲಿನಲ್ಲಿ ಎಸ್.ಐ.ಓ ಮಹಾರಾಷ್ಟ್ರ ದಕ್ಷಿಣ ವಿಭಾಗದ ರಾಜ್ಯಾಧ್ಯಕ್ಷರಾಗಿದ್ದರು. ಇವರು ವೃತಿಯಲ್ಲಿ ಇಂಜಿನಿಯರ್ ಆಗಿದ್ದು, ಉತ್ತಮ ವಾಗ್ಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.