ಬದಾಯುನ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಮುಖ್ಯ ಆರೋಪಿ ಅರ್ಚಕ ಬಂಧನ

0
352

ಸನ್ಮಾರ್ಗ ವಾರ್ತೆ

ಲಕ್ನೊ,ಜ.8: ಬದಾಯೂನಿನ ಅಂಗನವಾಡಿ ಕಾರ್ಯಕರ್ತೆಯ ಸಾಮೂಹಿಕ ಅತ್ಯಾಚಾರದಲ್ಲಿ ಮುಖ್ಯ ಆರೋಪಿಯಾಗಿರುವ ದೇವಸ್ಥಾನವೊಂದರ ಅರ್ಚಕ ಸತ್ಯನಾರಾಯಣ ಎಂಬಾತನನ್ನು ಗುರುವಾರ ರಾತ್ರೆಯ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ದೇವಸ್ಥಾನದ ಸಮೀಪದ ಗ್ರಾಮದಲ್ಲಿ ಅಡಗಿಕೊಂಡಿದ್ದ ಈತನನ್ನು ಸುದೀರ್ಘ ಹುಡುಕಾಟದಲ್ಲಿ ಕೊನೆಗೂ ಪೊಲೀಸರು ಪತ್ತೆಹಚ್ಚಿ ಸೆರೆಹಿಡಿದರು. ಪ್ರಕರಣಕ್ಕೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದು ಬುಧವಾರ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಇವರೆಲ್ಲ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು ಎನ್ನಲಾಗಿದೆ.

ಜನವರಿ ಮೂರರಂದು ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ಪುನಃ ಮನೆಗೆ ಬಂದಿರಲಿಲ್ಲ. ನಂತರ ದೇವಸ್ಥಾನದ ಅರ್ಚಕ ಮತ್ತು ಇಬ್ಬರು ಸೇರಿ ಮಹಿಳೆಯ ಮೃತದೇಹವನ್ನು ಮನೆಗೆ ತಲುಪಿಸಿದ್ದರು. ಮಹಿಳೆಯ ಮರಣೋತ್ತರ ಪರೀಕ್ಷೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವುದು ಬಯಲಾಗಿತ್ತು.