Thursday, May 24, 2018

Step 1 of 2

50%
  • ಸನ್ಮಾರ್ಗ ಕುರ್ ಆನ್  ಸ್ಪರ್ಧೆ
    (ಅಲ್ ಮಾಇದಃ ಮತ್ತು ಅಲ್ ಅನ್‍ಆಮ್ ಅಧ್ಯಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು)
    ನಿಯಮಗಳು
    1. ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಪ್ರಕಟಿತ ಹಾಳೆಗಳಲ್ಲಿ ಮಾತ್ರವೇ (ವಾಟ್ಸಪ್ ಮತ್ತು ವೆಬ್‍ಸೈಟ್  ಮೂಲಕ ಭಾಗವಹಿಸುವವರಿಗೆ ಇದು ಅನ್ವಯಿಸುವುದಿಲ್ಲ) ಉತ್ತರಗಳನ್ನು ತುಂಬಿಸಿ ಕಳುಹಿಸಬೇಕು. ಜೆರಾಕ್ಸ್  ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
    2. ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಮಕ್ಕಳ    ಅಥವಾ ಇತರರ ಹೆಸರಲ್ಲಿ ಸ್ಪರ್ಧಿಸುವುದನ್ನು ಪರಿಗಣಿಸಲಾಗುವುದಿಲ್ಲ.
    3. ಸನ್ಮಾರ್ಗ ವೆಬ್‍ಸೈಟ್ (www.sanmarga.com ) ಮೂಲಕವೂ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ    ಅವಕಾಶವಿದೆ. ವೆಬ್‍ಸೈಟ್ ಮೂಲಕ ಭಾಗವಹಿಸುವ ಅನಿವಾಸಿ ಭಾರತೀಯರು ತಮ್ಮ ವಿದೇಶಿ ಮೊಬೈಲ್   ಸಂಖ್ಯೆ ಮತ್ತು ಹಾಲಿ ವಿದೇಶಿ ವಿಳಾಸವನ್ನು ಕಡ್ಡಾಯವಾಗಿ   ನಮೂದಿಸಬೇಕು. ವೆಬ್‍ಸೈಟ್ ಮೂಲಕ ಸ್ಪರ್ಧೆಯಲ್ಲಿ         ಭಾಗವಹಿಸಲು ವಿದೇಶಿ ಹಾಗೂ ಸ್ವದೇಶಿಯರಿಗೆ ಮುಕ್ತ ಅವಕಾಶವಿದೆ.
    4.    ನಿಮ್ಮ ಉತ್ತರಗಳು ಸ್ಪಷ್ಟವಾಗಿರಲಿ.
    5.    ಪ್ರತಿ ಉತ್ತರದ ಮುಂದೆ ಅಧ್ಯಾಯದ ಹೆಸರು ಮತ್ತು ಸೂಕ್ತಗಳ ಸಂಖ್ಯೆ ಬರೆದರೆ ಉತ್ತಮ.
    6.    ಪ್ರತಿ ಉತ್ತರಕ್ಕೂ ಒಂದು ಅಂಕ ನೀಡಲಾಗುವುದು.
    7.    ವಾಟ್ಸಪ್ ಮೂಲಕ ಉತ್ತರಿಸುವವರು (ವಾಟ್ಸಪ್ ಸಂಖ್ಯೆ +91 8310722351) ತಮ್ಮ ಉತ್ತರಗಳನ್ನು ಕನ್ನಡ  ಲಿಪಿಯಲ್ಲಿ ಟೈಪ್ ಮಾಡಿರಬೇಕು ಅಥವಾ ಉತ್ತರದ ಫೋಟೋ ತೆಗೆದು ಕಳುಹಿಸುವವರು ಚಿತ್ರವು ಸ್ಪಷ್ಟವಾಗಿರುವಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಮಂಜಾಗಿ ಕಾಣುವ ಮತ್ತು ಸ್ಪಷ್ಟತೆ ಇಲ್ಲದ ಉತ್ತರಗಳನ್ನು ಪರಿಗಣಿಸಲಾಗುವುದಿಲ್ಲ.
    8.    ಉತ್ತರ ಪತ್ರಿಕೆಯಲ್ಲಿ ನಕಲು ಆಗದಂತೆ  ಜಾಗ್ರತೆ ವಹಿಸಬೇಕು. ನಾವು ಸ್ಪರ್ಧಿಗಳಿಂದ ಪ್ರಾಮಾಣಿಕತೆಯನ್ನು    ನಿರೀಕ್ಷಿಸುತ್ತೇವೆ. ಇದು ಕುರ್ ಆನನ್ನು ಅಧ್ಯಯನ ನಡೆಸಲು ಪ್ರೇರೇಪಿಸುವುದಕ್ಕೆ ಆಯೋಜಿಸಲಾಗಿರುವ ಸ್ಪರ್ಧೆಯಾಗಿದ್ದು, `ನಕಲು’ ಇಡೀ ಉದ್ದೇಶವನ್ನೇ ವ್ಯರ್ಥಗೊಳಿಸಬಹುದು.
    9.    ಉತ್ತರ ಕಳುಹಿಸಲು ಕೊನೆಯ ದಿನಾಂಕ ಜೂನ್: 22, 2018
    10.    ಅಂತಿಮ ತೀರ್ಮಾನ ತೀರ್ಪುಗಾರರದ್ದಾಗಿರುವುದು.
        ವಿವರಗಳಿಗಾಗಿ ಸಂಪರ್ಕಿಸಿ: +9880096128, +9844963059
    [ಬಹುಮಾನಗಳು: ಪ್ರಥಮ – ರೂ. 5,000, ದ್ವಿತೀಯ – ರೂ. 3,000, ತೃತೀಯ – ರೂ. 2,000
    [10 ಸಮಾಧಾನಕರ ಬಹುಮಾನಗಳು]
    ಉತ್ತರ ಕಳುಹಿಸಬೇಕಾದ ವಿಳಾಸ :
    ಸಂಚಾಲಕರು, ಸನ್ಮಾರ್ಗ ಕುರ್ ಆನ್  ಸ್ಪರ್ಧೆ ವಿಭಾಗ, ಸನ್ಮಾರ್ಗ ವಾರ ಪತ್ರಿಕೆ
    ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001