ಅತಂತ್ರ ಸ್ಥಿತಿಯಲ್ಲಿ ಕರ್ನಾಟಕ ಸರಕಾರ; ರಾಜೀನಾಮೆಯತ್ತ ಕಾಂಗ್ರೆಸ್-ಜೆಡಿಎಸ್‍ನ 11 ಶಾಸಕರು

0
492

ಬೆಂಗಳೂರು,ಜು.6: ಕರ್ನಾಟಕದಲ್ಲಿ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರಕಾರ ಪತನದ ದವಡೆಯಲ್ಲಿದೆ. ಜೆಡಿಎಸ್-ಕಾಂಗ್ರೆಸ್ ಪಕ್ಷದ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಜೆಡಿಎಸ್‍ನಿಂದ ಮೂವರು, ಕಾಂಗ್ರೆಸ್‍ನಿಂದ ಒಂಬತ್ತು ಮಂದಿ. 223 ಶಾಸಕರಿರುವ ವಿಧಾನಸಭೆಯಲ್ಲಿ ಹದಿನೈದು ಶಾಸಕರು ರಾಜೀನಾಮೆ ನೀಡಿದರೆ ಸರಕಾರಕ್ಕೆ ಉಳಿಗಾಲವಿಲ್ಲ.

ಜೆಡಿಎಸ್‍ನ ಎಚ್.ವಿಶ್ವನಾಥ್, ನಾರಾಯಣ ಗೌಡ, ಗೋಪಾಲಯ್ಯ ಮತ್ತು ಕಾಂಗ್ರೆಸ್‍ನ ಮಹೇಶ್, ಶಿವರಾಮ್ ಹೆಬ್ಬಾರ್, ಎಸ್‍ಟಿ ಸೊಶೇಖರ್, ಮುನಿರತ್ನ, ಪ್ರತಾಪ್ ಗೌಡ, ಬೈರತಿ ಬಸವರಾಜ್, ರಾಜೀನಾಮೆ ಪತ್ರ ನೀಡಲು ಸ್ಪೀಕರ್‍ರನ್ನು ಭೇಟಿಯಾಗಿದ್ದಾರೆ. ರಾಮಲಿಂಗೇ ರೆಡ್ಡಿ ಕೂಡ ರಾಜೀನಾಮೆ ನೀಡಲಿದ್ದಾರೆ. ಶಾಸಕರ ಓಲೈಕೆಗೆ ಸಚಿವ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ. ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಶಾಸಕರ ತುರ್ತು ಸಭೆ ಕರೆದಿದ್ದಾರೆ. ಇವರು ರಾಜೀನಾಮೆ ನೀಡಿದರೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಪತನ ಗ್ಯಾರಂಟಿ.

ಕರ್ನಾಟಕದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ. ವೇಣುಗೋಪಾಲ್ ಬೆಂಗಳೂರಿಗೆ ದೌಡಾಯಿಸಿದ್ದಾರೆ. 223 ಶಾಸಕರ ವಿಧಾನಸಭೆಯಲ್ಲಿ ಬಿಜೆಪಿ 104 ಸೀಟು, ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಬಿಎಸ್ಪಿ 1, ಕೆಜೆಪಿ 1, ಪಕ್ಷೇತರ ಒಬ್ಬ ಶಾಸಕ ಇದ್ದಾರೆ. ವಿಜಯನಗರ ಶಾಸಕ ಆನಂದಸಿಂಗ್, ಮತ್ತು ಗೋಖಾಕ ಶಾಸಕ ರಮೇಶ್ ರಮೇಶ್ ಜಾರಕಿ ಹೊಳಿ ರಾಜೀನಾಮೆ ನೀಡಿದ್ದರು.