ಉತ್ತರಪ್ರದೇಶದಲ್ಲಿ ಶಾಲಾ ಪುನರಾರಂಭ: ಲಾಕ್‌ಡೌನ್‌ ಅವಧಿಯಲ್ಲಿ ಕೊರೋನ ನಿರೀಕ್ಷಣಾ ಕೇಂದ್ರವಾಗಿದ್ದ ಶಾಲೆಯಲ್ಲಿ ಅಸ್ಥಿಪಂಜರ ಪತ್ತೆ!

0
490

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ಕೊರೋನ ನಿರೀಕ್ಷಣಾ ಕೇಂದ್ರವಾಗಿದ್ದ ಶಾಲೆಯೊಂದರ ತರಗತಿ ಕೋಣೆಯಲ್ಲಿ ಅಸ್ಥಿಪಂಜರ ಲಭಿಸಿದೆ. ವಾರಣಾಸಿಯ 19 ಕೋವಿಡ್ ರೋಗಿಗಳನ್ನು ಇಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಅಸ್ಥಿಪಂಜರ ಪುರುಷನದ್ದು ಎಂಬುದಾಗಿ ವರದಿಯಾಗಿದೆ.

ಶಾಲೆಗೆ ಸಂಬಂಧಪಟ್ಟವರು ತರಗತಿ ಕೋಣೆಗಳನ್ನು ಶುಚಿಗೊಳಿಸುವಾಗ ಘಟನೆ ಬಯಲಾಗಿದೆ. ಲಾಕ್ ಡೌನ್ ನಂತರ ಶಾಲೆ ತೆರೆಯುವ ಭಾಗವಾಗಿ ಬುಧವಾರ ಶಾಲೆಯನ್ನು ಶುಚಿಗೊಳಿಸಲಾಗುತ್ತಿತ್ತು. ಬೆಂಚಿನ ಕೆಳಗೆ ನೆಲದಲ್ಲಿ ಮಲಗಿದ ರೀತಿಯಲ್ಲಿ ಅಸ್ಥಿಪಂಜರವು ಪತ್ತೆಯಾಗಿದೆ.

ಕೊರೋನ ಹರಡಿದ ಹಿನ್ನೆಲೆಯಲ್ಲಿ ಜೆಪಿ ಮೆಹ್ತಾ ಇಂಟರ್ ಕಾಲೇಜು ಸರಕಾರದ ಕೊರೋನ ನಿರೀಕ್ಷಣಾ ಕೇಂದ್ರವಾಗಿತ್ತು. ಬಡವರು, ಭಿಕ್ಷುಕರು ಇಲ್ಲಿ ಹೆಚ್ಚಿದ್ದರು. ಶಾಲೆಯ ಅಧಿಕಾರಿಗಳು ತಿಳಿಸಿದ ಮೇಲೆ ಅಧಿಕಾರಿಗಳು ಬಂದು ಕ್ರಮ ಕೈಗೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಫಾರೆನ್ಸಿಕ್ ತಂಡ ಸ್ಥಳದಲ್ಲಿ ಪರಿಶೀಲಿಸುತ್ತಿದೆ. ಸಮಾಜಿಕ ಮಾಧ್ಯಮಗಳಲ್ಲಿ ಶಾಲೆಯಲ್ಲಿ ಸಿಕ್ಕಿದ ಅಸ್ಥಿಪಂಜರದ ದೃಶ್ಯ ವೈರಲ್‌ ಆಗಿವೆ.