ಮಾಲೆಗಾಂವ್ ಸ್ಫೋಟ: ಪ್ರಜ್ಞಾ ಸಿಂಗ್ ವಾರಕ್ಕೊಮ್ಮೆ ಹಾಜರಾಗಬೇಕೆಂದು ಆದೇಶಿಸಿದ ಕೋರ್ಟು

0
211

ಹೊಸದಿಲ್ಲಿ,ಮೇ 17: ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ವಾರದಲ್ಲೊಮ್ಮೆ ಹಾಜರಾಗಬೇಕೆಂದು ಮುಂಬೈಯ ವಿಶೇಷ ಎನ್‍ಐಎ ಕೋರ್ಟು ಆದೇಶಿಸಿದೆ. ಗಾಂಧಿ ಹತ್ಯೆಕೋರ ಗೋಡ್ಸೆಯನ್ನು ಬೆಂಬಲಿಸಿ ಪ್ರಜ್ಞಾರ ಹೇಳಿಕೆ ಹೊರ ಬಂದ ಬಳಿಕ ಕೋರ್ಟು ಈ ಆದೇಶ ಹೊರಡಿಸಿದೆ.

ಪ್ರಕರಣದ ಇನ್ನೊಬ್ಬ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಕೂಡ ಕೋರ್ಟಿಗೆ ಬಂದಿಲ್ಲ. ಕೋರ್ಟು ವಿಚಾರಣೆಯ ವೇಳೆ ಆರೋಪಿಗಳು ನಿರಂತರ ಗೈರು ಹಾಜರಾಗುವುದರ ಕುರಿತು ಕೋರ್ಟು ಅತೃಪ್ತಿ ಸೂಚಿಸಿತು. ಜೊತೆಗೆ ವಾರಕ್ಕೊಮ್ಮೆ ಹಾಜರಾಗುವಂತೆ ಹೇಳಿದೆ. ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಧಿಕಾರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ, ಸಮೀರ್ ಕುಲಕರ್ಣಿ ಪ್ರಕರಣದ ಇತರ ಆರೋಪಿಗಳಾಗಿದ್ದು ಎಲ್ಲರೂ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ.