ನನ್ನನ್ನು ದಲಿತನೆನ್ನುವುದು ನಿಲ್ಲಿಸಿ- ಮಲ್ಲಿಕಾರ್ಜುನ ಖರ್ಗೆ

0
653

ಸನ್ಮಾರ್ಗ ವಾರ್ತೆ

ಬೆಂಗಳೂರು, ಡಿ.6: ಉಪಚುನಾವಣೆಯ ಬಳಿಕ ಬಹುಮತ ಸಾಬೀತು ಪಡಿಸಲು ಆಗದೆ ಬಿಜೆಪಿಗೆ ಬಹುಮತ ಸಿಗದಿದ್ದರೆ ದಲಿತ ಮುಖ್ಯಮಂತ್ರಿಯಾಗುವರೆನ್ನುವ ಸಮಾಜಿಕ ಮಾಧ್ಯಮಗಳ ವದಂತಿಗೆ ಮಲ್ಲಿಕಾರ್ಜುನ ಖರ್ಗೆ ಕೋಪಿಸಿದ್ದಾರೆ. ಯಾಕೆ ಯಾವಾಲೂ ದಲಿತ ಎನ್ನುವುದು. ನಾನು ನನ್ನನ್ನು ಹಾಗೆ ಬಿಂಬಿಸಿಲ್ಲ. ನಾನೊಬ್ಬ ಕಾಂಗ್ರೆಸ್ಸಿಗ ಎಂದು ಖರ್ಗೆ ಹೇಳಿದರು. ಉಪಚುನಾವಣೆಯ ನಂತರ ಜೆಡಿಎಸ್- ಕಾಂಗ್ರೆಸ್ ಸಖ್ಯ ಸಾಧ್ಯತೆಯಿದೆ ಎನ್ನುವುದು ಒಳ್ಳೆಯ ಸುದ್ದಿ ಎಂದು ಮಲ್ಲಿಕಾರ್ಜು ಖರ್ಗೆ ಹೇಳಿದರು.

“ದಲಿತ ವಿಭಾಗದದವರಿಗೆ ಮುಖ್ಯಮಂತ್ರಿಯಾಗಲು ಮೀಸಲಾತಿ ಸೀಟಿರುವಂತೆ ನೀವು ಮಾತಾಡುತ್ತಿದ್ದೀರಿ. ಪ್ರತಿಯೊಬ್ಬರನ್ನೂ ಜಾತಿಯ ಹೆಸರಿನಲ್ಲಿ ಗುರುತಿಸುವುದು ಸಾಧ್ಯವೇ?” ಎಂದು ಖರ್ಗೆ ಪ್ರಶ್ನಿಸಿದರು.

ಆತ ಕುರುಬ, ಇನ್ನೊಬ್ಬ ವಕ್ಕಲಿಗ, ನೀವು ಲಿಂಗಾಯತರು, ಬ್ರಾಹ್ಮಣ ಹೀಗೆ ಹೇಳಲು ಸಾಧ್ಯವೇ?. ಹದನೈದು ಸೀಟಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆಂದು ಹೇಳಿದ್ದೇನೆ. ಇನ್ನು ಎಂತಹ ರಾಜಕೀಯ ಬದಲಾವಣೆಯಾಗುತ್ತದೆ ಎಂದು ಕಾದು ನೋಡೋಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕಾಂಗ್ರೆಸ್, ಜೆಡಿಎಸ್ 2018ರಲ್ಲಿ ಸಖ್ಯ ಮಾಡಿಕೊಂಡಿದ್ದಾಗ ಕಾಂಗ್ರೆಸ್ ನಾಯಕರಾದ ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆಯವರನ್ನು ದಲಿತ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು.