ಪ. ಬಂಗಾಳಕ್ಕೆ ನಾಳೆ ಅಮಿತ್ ಶಾ ಭೇಟಿ : ತೃಣಮೂಲ ಕಾಂಗ್ರೆಸ್ ಗೆ ಇಬ್ಬರು ನಾಯಕರ ರಾಜೀನಾಮೆ

0
371

ಸನ್ಮಾರ್ಗ ವಾರ್ತೆ

ಕೊಲ್ಕೊತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ನಿಂದ ಶುಕ್ರವಾರ ಇಬ್ಬರು ನಾಯಕರು ಹೊರಗೆ ಹೋಗಿದ್ದಾರೆ. ಹಿರಿಯ ಶಾಸಕ ಶಿಲ್‍ಭದ್ರ ದತ್ತ, ಅಲ್ಪಸಂಖ್ಯಾತ ವಿಭಾಗದ ನಾಯಕ ಕಬೀರುಲ್ ಇಸ್ಲಾಂ ತೃಣಮೂಲ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗ ತೃಣಮೂಲ ಕಾಂಗ್ರೆಸ್ ಬಿಕ್ಕಟ್ಟು ಎದುರಿಸತೊಡಗಿದೆ. ಬಾರಕ್‍ಪುರ ಕ್ಷೇತ್ರದ ಶಾಸಕ ಶಿಲ್‍ಭದ್ರ ದತ್ತ ಪ್ರಸಕ್ತ ಪರಿಸ್ಥಿತಿಯಲ್ಲಿ ತಾನು ಪಾರ್ಟಿಗೆ ಯೋಗ್ಯನಲ್ಲ ಎಂದು ಭಾವಿಸಿದ್ದೇನೆ . ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಯಾಕೆ ರಾಜೀನಾಮೆ ಕೊಡಬೇಕು. ಜನರ ಮತಗಳಿಂದ ಗೆದ್ದಿದ್ದೇನೆ. ಆದ್ದರಿಂದ ನಾನು ಅವರು ಎಲ್ಲಿಗೆ ಹೋದಾರು ಎಂದು ತೃಣಮೂಲ ಕಾಂಗ್ರೆಸ್ಸಿಗೆ ರಾಜೀನಾಮೆ ಪತ್ರ ಈ-ಮೇಲ್ ನಲ್ಲಿ ಕಳುಹಿಸಿದ ಬಳಿಕ ದತ್ತ ಮಾಧ್ಯಮಗಳಿಗೆ ಹೇಳಿದ್ದಾರೆ.

ನಿನ್ನೆ ಸುವೇಂದು ಅಧಿಕಾರಿ, ಜಿತೇಂದ್ರ ತಿವಾರಿ ರಾಜೀನಾಮೆ ನೀಡಿದ್ದರು. ಹಿರಿಯ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಬರುವ ಮೊದಲು ತೃಣಮೂಲ ಕಾಂಗ್ರೆಸ್‍ನಲ್ಲಿ ಬಿರುಕು ಬಿದ್ದಿದೆ. ನಾಳೆ ಅಮಿತ್ ಶಾ ಪ.ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾರ ಭೇಟಿಯ ವೇಳೆ ಹಲವು ಮಂದಿ ತೃಣಮೂಲಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸೂಚನೆ ಲಭಿಸಿದೆ.