ಪ.ಬಂಗಾಳದಲ್ಲಿ ಮಮತಾರನ್ನು ಸೋಲಿಸಲು ಅಬ್ಬಾಸ್‍ರಿಂದ ಹೊಸ ಪಕ್ಷ

0
500

ಸನ್ಮಾರ್ಗ ವಾರ್ತೆ

ಕೊಲ್ಕತಾ: ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಉದ್ದೇಶದಿಂದ ಬಿಜೆಪಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿರುವ ವೇಳೆಯೇ ಅಬ್ಬಾಸ್ ಸಿದ್ದೀಕಿ ಎಂಬ ಮಸೀದಿ ಇಮಾಮೊಬ್ಬರು ಇಂಡಿಯನ್ ಸೆಕ್ಯೂಲರ್ ಫ್ರಂಟ್(ಐಎಸ್‍ಎಫ್) ಹೊಸ ಪಾರ್ಟಿಯನ್ನು ಸ್ಥಾಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿವಿಧ ಜಿಲ್ಲೆಗಳ ಹತ್ತು ಗೋತ್ರದವರು, ದಲಿತ ಸಂಘಟನೆಗಳ ಬೆಂಬಲದಿಂದ ಐಎಸ್‍ಎಫ್ ಆರಂಭವಾಗಿದ್ದು, ಉವೈಸಿಯವರ ಎಂಐಎಂಐಎಂಯನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಪಾರ್ಟಿ ಬೆಂಬಲಿಸಲಿದೆ.

ಎಪ್ಪತ್ತು ಸೀಟುಗಳಲ್ಲಿ ಈ ಪಾರ್ಟಿ ಸ್ಪರ್ಧಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಸ್ಥಾನಗಳಿವೆ. ಕಾಂಗ್ರೆಸ್, ಕಮ್ಯೂನಿಸ್ಟ್ ಪಾರ್ಟಿಯ ಪತನ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನಡೆದಿದೆ. ಇದೇ ವೇಳೆ, ಮುಸ್ಲಿಮ್ ಬಹುಸಂಖ್ಯಾತರಾಗಿರುವಲ್ಲಿ ಇಂತಹ ಪಾರ್ಟಿಗಳು ಮಮತಾ ಬ್ಯಾನರ್ಜಿಗೆ ದೊಡ್ಡ ತಲೆನೋವು ಸೃಷ್ಟಿಸಬಹುದಾಗಿದೆ.

ಆಲ್ ಇಂಡಿಯಾ ಮೈನಾರಿಟಿ ಫಾರಂ ಅಧ್ಯಕ್ಷ ಇದ್ರಿಸ್ ಆಲಿ ಮುಸ್ಲಿಮರು ಮಮತಾರ ಹಿಂದೆ ಬಂಡೆಯಂತೆ ನಿಂತು ಬಿಜೆಪಿಯ ವಿರುದ್ಧ ಹೋರಾಡಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.