ಬಿಜೆಪಿ ವಿರುದ್ಧ ಪ್ರಾದೇಶಿಕತೆಯ ಅಸ್ತ್ರ ಪ್ರಯೋಗಿಸಿದ ಮಮತಾ ಬ್ಯಾನರ್ಜಿ: ಹಿಂದಿ ಹೇರಿಕೆಗೆ ತಿರುಗೇಟೇ ಅವರ ಬಂಗಾಳಿ ಹೇಳಿಕೆ?

0
403

ಕೊಲ್ಕತಾ, ಜೂ. 15: ಪಶ್ಚಿಮಬಂಗಾಳದಲ್ಲಿ ವಾಸಿಸುವವರು ಬಂಗಾಳಿ ಭಾಷೆ ಕಲಿತಿರಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೊಲ್ಕತಾದಲ್ಲಿ ನಡೆಯುವ ವೈದ್ಯರ ಮುಷ್ಕರ ಮತ್ತು ಬಿಜೆಪಿಯನ್ನು ಟೀಕಿಸಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಹೊರಗಿನಿಂದ ಬಂದವರು ವೈದ್ಯರನ್ನು ಪ್ರಚೋದಿಸುತ್ತಿದ್ದಾರೆ. ಮುಷ್ಕರ ಇರುವ ಆಸ್ಪತ್ರೆಯ ಹೊರಗೆ ಹೊರಗಿನಿಂದ ಬಂದವರು ಘೋಷಣೆ ಕೂಗುತ್ತಿದ್ದಾರೆ. ತಂಟೆಕೋರತನ ತೋರಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರಗಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಾಸಿಸುವವರು ಬಂಗಾಳಿ ಭಾಷೆ ಕಲಿತಿರಬೇಕು ಎಂದು ಮಮತಾ ಹೇಳಿದರು. ಬಿಜೆಪಿಯ ಹಿಂದಿ ಪ್ರೇಮವನ್ನು ಉದ್ದೇಶಿಸಿಯೇ ಅವರು ಈ ಬಂಗಾಳಿ ಅಸ್ಮಿತೆಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿಯನ್ನು ಎದುರಿಸುವುದಕ್ಕೆ ಅವರು ಮುಂದೆ ಬಂಗಾಳಿ ಅಸ್ಮಿತೆಯನ್ನು ಪ್ರಯೋಗಿಸುವ ಸೂಚನೆ ಇದರಲ್ಲಿದೆ.

ಚುನಾವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲಿ ಮಾಡಬೇಕು. ಮತಯಂತ್ರದಲ್ಲಿ ತಿರುಚುವಿಕೆ ನಡೆಸಿ ಬಿಜೆಪಿ ಕೆಲವು ಸೀಟುಗಳಲ್ಲಿ ವಿಜಯಿಯಾಗಿದೆ. ಈ ರೀತಿ ಬಿಜೆಪಿಗೆ ಬಂಗಾಳಿಗಳನ್ನು ಮತ್ತು ಅಲ್ಪಸಂಖ್ಯಾತರನ್ನು ಸೋಲಿಸಲು ಸಾಧ್ಯವಿಲ್ಲ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.