ಸುಭಾಷ್ ಚಂದ್ರ ಬೋಸ್‍ರ ಯೋಜನಾ ಆಯೋಗ ಆಶಯವನ್ನು ಬಿಜೆಪಿ ಇಲ್ಲದಾಗಿಸಿದೆ- ಮಮತಾ ಬ್ಯಾನರ್ಜಿ ಕಿಡಿ

0
291

ಸನ್ಮಾರ್ಗ ವಾರ್ತೆ

ಕೊಲ್ಕತಾ: ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನದಂದು ರಾಷ್ಟ್ರೀಯ ರಜೆ ಘೋಷಿಸಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಕೇಂದ್ರ ಸರಕಾರ ಇದಕ್ಕೆ ಅಗತ್ಯ ಕ್ರಮ ಸ್ವೀಕರಿಸಬೇಕೆಂದು ಅವರು ಆಗ್ರಹಿಸಿದರು. ರಾಜಾರಹಾತ್ ನಲ್ಲಿ ಸುಭಾಷ್ ಚಂದ್ರ ಭೋಸ್ ಸ್ಮಾರಕ ಮಾಡುವುದು ಮತ್ತು ಅವರ ಹೆಸರಿನಲ್ಲಿ ಯುನಿವರ್ಸಿಟಿ ನಿರ್ಮಿಸುವುದನ್ನು ಮಮತಾ ಹೇಳಿದರು.

ಯುನಿವರ್ಸಿಟಿಯ ನಿರ್ಮಾಣ ವೆಚ್ಚ ಸಂಪೂರ್ಣ ರಾಜ್ಯ ಸರಕಾರ ವಹಿಸಲಿದೆ. ವಿದೇಶಿ ಯನಿವರ್ಸಿಟಿಯ ಸಹಕಾರ ಸುಭಾಸ್ ಚಂದ್ರ ಬೋಸ್ ಯುನಿವರ್ಸಿಟಿಗೆ ಸಿಗಲಿದೆ. ಈ ಸಲದ ಗಣರಾಜ್ಯೋತ್ಸವ ಪರೇಡನ್ನು ಸುಭಾಷ್ ಚಂದ್ರ ಬೋಸ್‍ರಿಗೆ ಸಮರ್ಪಿಸುವುದಾಗಿ ಹೇಳಿದರು.

ಸ್ವಾತಂತ್ರ್ಯ ದೊರಕುವ ಮೊದಲು ಯೋಜನಾ ಆಯೋಗ, ನ್ಯಾಶನಲ್ ಆರ್ಮಿಗೆ ಸುಭಾಸ್ ಚಂದ್ರ ಬೋಸ್ ರೂಪಿಸಿದ್ದರು. ಇದರಲ್ಲಿ ಯೋಜನಾ ಆಯೋಗ ಎನ್ನುವ ಆಶಯವನ್ನು ಬಿಜೆಪಿ ಸರಕಾರ ಇಲ್ಲದಾಗಿಸಿದೆ ಎಂದು ಮಮತಾ ಆರೋಪಿಸಿದರು.