ಪ್ರಧಾನಿಯವರ ‘ಮನ್ ಕೀ ಬಾತ್’‌ಗೆ 4 ಲಕ್ಷ ‌ಡಿಸ್‌ಲೈಕ್: ವಿದ್ಯಾರ್ಥಿಗಳಿಂದ ಹೆಚ್ಚಿದ ಆಕ್ರೋಶ

0
929

ಸನ್ಮಾರ್ಗ ವಾರ್ತೆ

ನವದೆಹಲಿ.ಆ,30: ಪ್ರಧಾನಿ ಮೋದಿಯವರು ನಿನ್ನೆ ನೀಡಿದ ಮನ್ ಕೀ ಬಾತ್ ಸಂದೇಶವು ಭಾರತೀಯ ಜನತಾ ಪಾರ್ಟಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಂಡಿದ್ದು, 4 ಲಕ್ಷ ಜನರು ವೀಡಿಯೋವನ್ನು ಡಿಸ್‌ಲೈಕ್ ಮಾಡಿದ್ದಾರೆ. ಈ ಪ್ರಕ್ರಿಯೆಯು ನಿನ್ನೆಯಿಂದ ಹೆಚ್ಚುತ್ತಲೇ ಇದೆ ಎಂಬುದಾಗಿ ವರದಿಯಾಗಿದೆ.

ಕಮೆಂಟ್‌ಗಳಲ್ಲಿ ಕಂಡು ಬಂದ ಸಂದೇಶಗಳ ಪ್ರಕಾರ ಜೆಇಇ- ನೀಟ್‌ ಬಗ್ಗೆ ಮೋದಿ ಮಾತನಾಡುತ್ತಾರೆಂಬ ಆಶಾ ಭಾವನೆಯಿತ್ತು‌. ಆದರೆ ಅವರು ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಗೊಂಬೆಗಳ ಉದ್ಯಮದ ಹೆಸರಲ್ಲಿ ವಿಷಯವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂಬ ಕೂಗು ಕೇಳಿ ಬಂದಿದೆ.

ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಆರ್ಥಿಕ ಅವ್ಯವಸ್ಥೆ, ಬಡತನವು ತಾಂಡವಾಡುತ್ತಿದ್ದು ಈ ವಿಷಯಗಳನ್ನು ಮರೆಮಾಚಲು ಇನ್ನೂ ಎಂತಹ ವಿಷಯಗಳತ್ತ ಗಮನ ಸೆಳೆಯಲು ಬಯಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನ್ ಮೋಹನ್ ಸಿಂಗ್ ರವರನ್ನು ಅಪಮಾನಿಸಿದ್ದಕ್ಕೆ ಇಂದು ಅನುಭವಿಸುವಂತಾಯಿತು, ಬಿಜೆಪಿಗೆ ಮತ ನೀಡಿ ನಾನು ತಪ್ಪು ಮಾಡಿದೆ, ಮುಂದಿನ ಚುನಾವಣೆಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ  ಎಂಬ ಹಲವು ಕಮೆಂಟ್‌ಗಳು ಇವುಗಳಲ್ಲಿ ವೈರಲ್ ಆಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ‘ವಿದ್ಯಾರ್ಥಿಗಳ’ ಬಗ್ಗೆ ಚರ್ಚೆಗೆ ಬನ್ನಿ ಎಂದರೆ ಪ್ರಧಾನಿ ‘ಗೊಂಬೆಗಳ’ ಬಗ್ಗೆ ಚರ್ಚೆಗೆ ಬಂದಿದ್ದಾರೆ ಎಂದು ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಮ್ಮ ಮನ್ ‌ಕೀ ಬಾತ್‌ನಲ್ಲಿ  ಭಾರತದಲ್ಲಿ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆಲ ಉದ್ಯಮಗಳನ್ನು ಪ್ರಸ್ತಾಪಿಸಿದ್ದರು.

ಭಾರತದ ಬೊಂಬೆಗಳ ಉದ್ಯಮ ಹಾಗೂ ಭಾರತೀಯ ಕಂಪ್ಯೂಟರ್ ಗೇಮ್​ಗಳ ಉದ್ಯಮಕ್ಕೆ ಪುಷ್ಟಿ ನೀಡುವ ಮೂಲಕ ಬೊಂಬೆಗಳ ನಿರ್ಮಾಣಕ್ಕೆ ಒಂದಾಗಿ(Team Up for Toys) ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.