ಛತ್ತೀಸ್ ಘಡ: ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!!!

0
382

ಸನ್ಮಾರ್ಗ ವಾರ್ತೆ

ಛತ್ತೀಸ್ ಘಡ: ಯುವಕನೋರ್ವ ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವಿಚಿತ್ರ ಘಟನೆ ಛತ್ತೀಸ್ ಘಡದ ಜಗದಲ್ಪುರ್ ಎಂಬಲ್ಲಿ ನಡೆದಿದೆ.

ಜಗದಲ್ಪುರ್ ನಲ್ಲಿ ಸಣ್ಣಮಟ್ಟಿನ ರೈತ ಹಾಗೂ ಕಾರ್ಮಿಕನಾಗಿರುವ ಚಂದು ಮೌರ್ಯ ಇಬ್ಬರು ಯುವತಿಯರನ್ನು ಮದುವೆಯಾದ ಯುವಕ. ಹಸೀನಾ ಹಾಗೂ ಸುಧಾರಿ ಎಂಬಿಬ್ಬರು ಯುವತಿಯರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ‌.

ಇಬ್ಬರು ಯುವತಿಯರನ್ನು ಚಂದು ಪ್ರೀತಿಸಿದ್ದರಿಂದ ಕಳೆದ ಒಂದು ವರ್ಷದಿಂದ ಲಿವ್ ಇನ್ ರಿಲೇಶನ್ ಶಿಪ್ ಸಂಬಂಧವಿಟ್ಟುಕೊಂಡಿದ್ದನು . ಗ್ರಾಮಸ್ಥರು ಇವರ ಲಿವ್ ಇನ್ ಸಂಬಂಧವನ್ನು ಆಕ್ಷೇಪಿಸಿದ ನಂತರ ಇವರಿಗೆ ಮದುವೆ ಮಾಡಿಸಲು ನಿರ್ಧರಿಸಿದ ಚಂದುವಿನ ಕುಟುಂಬ ಇಬ್ಬರೂ ಯುವತಿಯರ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡರು ಎಂದು ವರದಿಯಾಗಿದೆ.

ಅಲ್ಲದೇ, ಒಂದೇ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರ‌ ಹೆಸರನ್ನು ಒಟ್ಟಿಗೇ ಮುದ್ರಿಸಲಾಗಿತ್ತು‌. ಸುಮಾರು 700 ಜನರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ನಾವು ತಾವು ತುಂಬಾ ಸಂತೋಷವಾಗಿದ್ದೇವೆ ಎಂದು ಹೇಳುವ ಹಸೀನಾ ಮತ್ತು ಸುಧಾರಿ, ನಾವಿನ್ನು ಒಂದು ಕುಟುಂಬವಾಗಿ ಬಾಳುತ್ತೇವೆ, ಹೊಲದಲ್ಲಿ ಒಟ್ಟಿಗೆ ದುಡಿಯುವುದಾಗಿ ಹೇಳಿದ್ದಾರೆ.

ಚಂದುವಿನ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.