ಮನದನ್ನೆಯ ಆಯ್ಕೆ: ಯಾವ ಬಗೆ?

0
943

✒ ಅಕ್ಬರಲಿ ಬಜಪೆ

ಮದುವೆ ಎನ್ನುವುದು ಬಹಳ ಪವಿತ್ರವಾದ ಸಂಬಂಧ. ಎಲ್ಲಾ ಧರ್ಮಗಳಲ್ಲಿಯೂ ಮದುವೆಯನ್ನು ಒಂದು ಪವಿತ್ರವಾದ ಕಾರ್ಯವಾಗಿ ಮಾಡಲಾಗಿದೆ. ಮದುವೆ  ಒಂದು ಕುಟುಂಬವನ್ನು ಇನ್ನೊಂದು ಕುಟುಂಬದ ಜೊತೆಗೆ ಪವಿತ್ರವಾದ ಸಂಬಂಧದಿಂದ ಬೆಸೆಯುತ್ತದೆ. ಮದುವೆಯಾದ ಗಂಡು ಮತ್ತು ಹೆಣ್ಣು ಅನ್ಯೋನ್ಯತೆಯಿಂದ ಇದ್ದರೆ ಎರಡೂ ಕುಟುಂಬಗಳು ಅನ್ಯೋನ್ಯತೆಯಿಂದ ಬಾಳಿ ಬದುಕಲು ಸಾಧ್ಯವಾಗುತ್ತದೆ.  ಆದುದರಿಂದ ಮದುವೆಯನ್ನು ನಿಶ್ಚಯಿಸುವಾಗ  ಗಂಡು ಮತ್ತು ಹೆಣ್ಣಿನ  ಹೆತ್ತವರು ಬಹಳ ಜಾಗ್ರತೆಯನ್ನು ವಹಿಸಬೇಕಾಗುತ್ತದೆ

ಇಂದಿನ ಸಮಾಜದಲ್ಲಿ ಎಲ್ಲಾ ಸಮುದಾಯದಲ್ಲಿಯೂ  ಮದುವೆ ಸಮಾರಂಭವನ್ನು  ಶ್ರೀಮಂತರು ನಡೆಸುವಾಗ ತಮ್ಮ ಅಂತಸ್ತಿಗೆ ತಕ್ಕುದಾದ ವರನನ್ನು ಅನ್ವೇಷಣೆ ಮಾಡುವಾಗ ಶ್ರೀಮಂತಿಗೆ ಹೆಚ್ಚು ಮಹತ್ವವನ್ನು ಕೊಡುವುದನ್ನು ಕಾಣಬಹುದು. ಇಂತಹ ಮದುವೆಯನ್ನು ನಡೆಸುವವರು ಹುಡುಗ ಮತ್ತು ಹುಡುಗಿಯ ಧಾರ್ಮಿಕ ಪ್ರಜ್ಞೆ ಮತ್ತು  ವಿದ್ಯಾಭ್ಯಾಸ ಪರಿಗಣಿಸುವುದಿಲ್ಲ. ಇದರಿಂದಾಗಿ  ಕೆಲವೇ ದಿನಗಳಲ್ಲಿ ಸಣ್ಣ ಪುಟ್ಟ ವಿಷಯದಲ್ಲಿ ಇಂತಹ ಮದುವೆ ವಿಚ್ಛೇದನ ಮೂಲಕ ಕೊನೆಗೊಳ್ಳುವುದನ್ನು ಸಮಾಜದಲ್ಲಿ ಕಾಣುತಿದ್ದೇವೆ.

ಇತ್ತೀಚಿಗೆ ಕೇರಳದಲ್ಲಿ ನಡೆದಂತಹ ಘಟನೆಯು ಇದನ್ನು ಪುಷ್ಟಿಕರಿಸುತ್ತದೆ ಮದುವೆಯಾಗಿ ಎಲ್ಲಾ ಐಶಾರಾಮಿಗಳು ಇದ್ದರೂ ತನ್ನ ಗಂಡನಲ್ಲಿ ಕಾರು ಇದ್ದರೂ ಬೈಕ್ ತೆಗೆಯಲಿಲ್ಲ ಎಂಬ ಕಾರಣಕ್ಕಾಗಿ ವಿಚ್ಚೇದನ ಕೊಟ್ಟದನ್ನು ನೋಡಬಹುದು.

ಇಂತಹ ವಿಚ್ಛೇದನಗೊಂಡ ಮದುವೆಯಲ್ಲಿ ಪುನರ್ವಿವಾಹವನ್ನು ಮಾಡುವಾಗ ಹೆಚ್ಚಿನ ಶ್ರೀಮಂತರು  ಮಗನಿಗೆ ಅಥವಾ ಮಗಳಿಗೆ ಧಾರ್ಮಿಕ ಪ್ರಜ್ಞೆಯುಳ್ಳ ಬಡವನಾದರೂ ಆಗಬಹುದು ತನ್ನ ಮಗ/ಳು ಕ್ಷೇಮವಾಗಿ ಇರಲಿ ಎಂದು ಹೇಳಿ ಇನ್ನೊಂದು ಮದುವೆಯನ್ನು ಮಾಡುತ್ತಾರೆ. ಇದರಲ್ಲಿ ಆಯಾ ಧರ್ಮದ ಕೆಲವು ವಿದ್ವಾಂಸರು ಮತ್ತು ಗುರುಗಳು ಕೂಡ ಹೊರತಾಗಿಲ್ಲ. ಆದುದರಿಂದ ಮದುವೆಯ ವಿಷಯದಲ್ಲಿ ನಾವು  ಹೆಣ್ಣಿನ ಸೌಂದರ್ಯವನ್ನು ನೋಡಿಯೋ ಅಥವಾ ಅವಳ ಸಂಪತ್ತನ್ನು ನೋಡಿಯೋ  ಮದುವೆ ಆದರೆ ನಮಗೆ ನಾಶ ಕಾದಿದೆ ಎನ್ನುವ ಪ್ರವಾದಿ‌ ಮಾತನ್ನು ಈ ಸಂದರ್ಭದಲ್ಲಿ  ನೆನಪಿಸಬೇಕಾಗಿದೆ.