ಮಂಗಳೂರಿನಲ್ಲಿ ಶಾಂತಿ ಕದಡುವ ಯತ್ನ: ಉಗ್ರ ಸಂಘಟನೆ ಬೆಂಬಲಿಸಿ ಗೋಡೆ ಬರಹ

0
614

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಕೋಮು ಸೂಕ್ಷ್ಮವಾಗಿ ಪ್ರದೇಶವಾಗಿ ಗುರುತಿಸಿಕೊಂಡಿರುವ ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಮಂಗಳೂರಿನ ಕದ್ರಿ ಸಮೀಪ ಇರುವ ಅಪಾರ್ಟ್ಮೆಂಟ್‌ವೊಂದರ ಕಂಪೌಂಡ್ ಗೋಡೆಯ ಮೇಲೆ ಹಿಂದೂ ಪರ ಸಂಘಟನೆಗಳಿಗೆ ಬೆದರಿಕೆಯೊಡ್ಡಿ, ಉಗ್ರ ಸಂಘನೆಯನ್ನು ಬೆಂಬಲಿಸಿರುವ ಗೋಡೆ ಬರಹವೊಂದು ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಮಂಗಳೂರಿನ ಸರ್ಕ್ಯೂಟ್‌‌ ಹೌಸ್‌‌ನ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌‌ ಒಂದರ ಕಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆದಿದ್ದು, “Do not force us to invite Lashkar-e-Toiba and Taliban to Deal with Sanghis and Manvedis” ಎಂದು ಬರೆದಿದ್ದರು.

ಉಗ್ರ ಸಂಘಟನೆಗಳ ಪರ ವಿವಾದಾತ್ಮಕವಾದ ಗೋಡೆ ಬರಹ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕದ್ರಿ ಪೊಲೀಸರು ವಿವಾದಿತ ಬರಹದ ಮೇಲೆ ಪೈಂಟ್‌ ಬಳಿದಿದ್ದಾರೆ. ಈ ಮೂಲಕ ಮಂಗಳೂರಿನಲ್ಲಿ ಶಾಂತಿಯನ್ನು ಕದಡಲು ಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಮಂಗಳೂರಿನ ಶಾಂತಿಪ್ರಿಯ ನಾಗರಿಕರು ಒತ್ತಾಯಿಸಿದ್ದಾರೆ.