ದ.ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಸದಸ್ಯತ್ವ ನವೀಕರಣಕ್ಕೆ ಫೆ.11 ಕೊನೆಯ ದಿನ

0
537

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ), ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಮತ್ತು ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಫೆಬ್ರವರಿ 11, 2019 ಕೊನೆಯ ದಿನವಾಗಿರುತ್ತದೆ.

ಸದಸ್ಯರು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ 2 ಭಾವಚಿತ್ರಗಳೊಂದಿಗೆ 300 ರೂ. ಶುಲ್ಕವನ್ನು ಸಂಘದ ಕಚೇರಿ (ಮಂಗಳೂರು ಪ್ರೆಸ್‍ಕ್ಲಬ್) ಯಲ್ಲಿ ಪಾವತಿಸಿ ಸದಸ್ಯತ್ವ ನವೀಕರಿಸಬಹುದಾಗಿದೆ.

ಫೆಬ್ರವರಿ 11, 2019, ಸಂಜೆ 4 ಗಂಟೆಯ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂಘದ ಸದಸ್ಯರಾಗಿರುವ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಜಿಲ್ಲಾ ಸಂಘದ ಅಧೀನದಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕವೇ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ನಿಗದಿತ ನಮೂನೆಯ ಅರ್ಜಿ ಫಾರಂಗಳು ಸಂಘದ ಕಚೇರಿಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಘದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.