ಬ್ಯಾಂಕಿಂಗ್ ಬಿಕ್ಕಟ್ಟು: ವಿತ್ತಸಚಿವರು ಸಮಸ್ಯೆಗೆ ಪರಿಹಾರ ಹುಡುಕದೆ ಅದರ ಹೊಣೆಯನ್ನು ವಿರೋಧ ಪಕ್ಷದ ತಲೆಗೆ ಕಟ್ಟುತ್ತಿದ್ದಾರೆ- ಮನ್‌ಮೋಹನ್ ಸಿಂಗ್ ಟೀಕೆ

0
550

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.17: ದೇಶದಲ್ಲಿರುವ ಬ್ಯಾಂಕಿಂಗ್ ಬಿಕ್ಕಟ್ಟಿಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‍ರ ಆರೋಪಗಳಿಗೆ ಉತ್ತರಿಸಿದ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್ ಸಮಸ್ಯೆಗೆ ಪರಿಹಾರ ಹುಡುಕದೆ ಅದರ ಹೊಣೆಯನ್ನು ವಿರೋಧ ಪಕ್ಷದ ತಲೆಗೆ ಕಟ್ಟಲು ನಿರ್ಮಲಾ ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಜನರಿಗೆ ಪ್ರಯೋಜನ ಇರುವ ನೀತಿಗಳನ್ನು ರೂಪಿಸುವಲ್ಲಿ ಬಿಜೆಪಿ ಸರಕಾರಕ್ಕೆ ಉದಾಸೀನವಿದೆ. ನಿರುದ್ಯೋಗಕ್ಕೆ ಯಾವ ಪರಿಹಾರ ಮಾಡಲು ಸರಕಾರದಿಂದ ಸಾಧ್ಯವಾಗಿಲ್ಲ. ಉದ್ಯಮಗಳು ಬೆಳೆಯಲು ಅವಕಾಶ ನೀಡುವುದೇ ನಿರುದ್ಯೋಗ ಪರಿಹಾರಕ್ಕೆ ಇರುವ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಪಿಎಂಸಿ ಬ್ಯಾಂಕ್ ಹೂಡಿಕೆದಾರರಿಗೆ ಪ್ರಧಾನಿ ಸಂತ್ರಸ್ತ ನಿಧಿಯಿಂದ ನಷ್ಟಪರಿಹಾರ ಕೊಡಬೇಕೆಂದು ಸಿಂಗ್ ಹೇಳಿದರು. ದೇಶದಲ್ಲಿ ಇಂದಿರುವ ಬ್ಯಾಂಕಿಂಗ್ ಇಕ್ಕಟ್ಟಿಗೆ ಕಾರಣ ಮನ್‍ಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಎಂದು ನಿರ್ಮಲಾ ಹೇಳಿದ್ದರು.