ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಹಲವಾರು ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆ- ಕೆ.ಸಿ.ವೇಣುಗೋಪಾಲ್

0
179

ಕಲಬುರ್ಗಿ,ಮೇ.14: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಬೆನ್ನಿಗೆ ಕರ್ನಾಟಕದಲ್ಲಿ ಹಲವಾರು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು. ಕಾಂಗ್ರೆಸ್‍ಗೆ ಕುದುರೆ ವ್ಯವಹಾರ ಮಾಡುವ ಅಗತ್ಯವಿಲ್ಲ. ಸಹಜವಾಗಿ ಶಾಸಕರು ನಮ್ಮ ಪಾಳಯಕ್ಕೆ ಬರಲಿದ್ದಾರೆ ಎಂದು ಅವರು ಹೇಳಿದರು. ಕಳೆದ ವರ್ಷದಿಂದ ಬಿಜೆಪಿ ಕುದುರೆ ವ್ಯಾಪಾರಕ್ಕೆ ಸಾಕ್ಷಿಯಾಗುತ್ತಿದೆ.ಆದರೆ ಜೆಡಿಎಸ್, ಕಾಂಗ್ರೆಸ್ ಇಲ್ಲಿ ಸಖ್ಯದೊಂದಿಗೆ ಮುಂದೆ ಸಾಗುತ್ತಿದೆ. ನಾವು ಇಲ್ಲಿ ಒಂದು ವರ್ಷದಿಂದ ಆಳ್ವಿಕೆ ಮಾಡುತ್ತಿದ್ದೇವೆ. ಅದು ಮುಂದುವರಿಯುತ್ತದೆ ಎಂದು ವೇಣುಗೋಪಾಲ್ ಕರ್ನಾಟಕದ ಕುರಿತು ಹೇಳಿದರು.

ಕಾಂಗ್ರೆಸ್ ಬಿಜೆಪಿ ಶಾಸಕರನ್ನು ಗೋಣಿಯಲ್ಲಿ ತುಂಬಿಸಿ ಕಟ್ಟಿಹಾಕಬಹುದೆಂದು ಹೆದರಿ ಕಳೆದ ಜನೆವರಿಯಲ್ಲಿ ತನ್ನ 104 ಶಾಸಕರನ್ನು ಗುರುಗ್ರಾಮದ ಹೊಟೇಲ್‍ನಲ್ಲಿ ಬಿಜೆಪಿ ವಾಸ್ತವ್ಯ ಹೂಡಿಸಿತ್ತು. ಇದಾಗಿ ಒಂದು ತಿಂಗಳ ಬಳಿಕ ಬಿಎಸ್ ಯಡಿಯೂರಪ್ಪ ತಮ್ಮ ಹದಿನೆಂಟು ಶಾಸಕರಿಗೆ 200 ಕೋಟಿ ರೂಪಾಯಿ ವಾಗ್ದಾನ ಮಾಡಿದರು ಎಂದು ಕಾಂಗ್ರೆಸ್ ಆರೋಪಿಸಿತ್ತು. 224 ಸದಸ್ಯರ ವಿಧಾನಸಭೆಯಲ್ಲಿ ಜೆಡಿಎಸ್‍ಗೆ 37 ಶಾಸಕರು ಮತ್ತು ಕಾಂಗ್ರೆಸ್‍ಗೆ 80 ಶಾಸಕರು ಇದ್ದಾರೆ. ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮುಂದುವರಿಯುತ್ತಿದೆ.