ಪ್ರಾಪ್ತ ವಯಸ್ಸಾದಾಗ ಪತಿಯನ್ನು ಒಪ್ಪಿಕೊಂಡರೆ ಅಂತಹ ಬಾಲ್ಯವಿವಾಹಗಳಿಗೆ ಅಂಗೀಕಾರ ನೀಡಬಹುದು: ಬಾಂಬೆ ಹೈಕೋರ್ಟು

0
587

ಮುಂಬೈ,ಮೇ 7: ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ನಡೆದದ್ದರಿಂದ ಅಸಿಂಧುಗೊಂಡ ಮದುವೆ ಹುಡುಗಿಗೆ ಹದಿನೆಂಟು ವರ್ಷವಾದಾಗ ಪತಿಯ ಜೊತೆ ಬದುಕಲು ಬಯಸಿದರೆ ಅಂತಹ ಮದುವೆಗಳಿಗೆ ಅಂಗೀಕಾರ ನೀಡಬಹುದು ಎಂದು ಬಾಂಬೆ ಹೈಕೋರ್ಟು ಹೇಳಿದೆ. ಹದಿನಾಲ್ಕು ವರ್ಷದ ಹುಡುಗಿಯನ್ನು ಮದುವೆಯಾಗಿ ಕಿರುಕುಳ ನೀಡಿದ ಪ್ರಕರಣವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ 56 ವರ್ಷದ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ ಜಸ್ಟಿಸ್ ರಂಜಿತ್ ಮೊರೆ, ಭಾರತಿ ದಾಂಗ್ರೆಯನ್ನೊಳಗೊಂಡ ಹೈಕೋರ್ಟು ಪೀಠ ಹೀಗೆ ಹೇಳಿದೆ.

ಮೊದಲ ಪತಿಯ ಸಾವಿನ ನಂತರ ವಕೀಲರು 2015ರಲ್ಲಿ ಹದಿನಾಲ್ಕು ವರ್ಷದ ಬಾಲಕಿಯನ್ನು ಮದುವೆಯಾಗಿದ್ದರು. 2017ರಲ್ಲಿ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು. ಅಜ್ಜ ಮತ್ತು ಅಜ್ಜಿ ಬಲವಂತಪಡಿಸಿ ಮದುವೆ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಳು. ನಂತರ ಪೊಲೀಸರು ಆರೋಪಿಗಳಾದ ವಕೀಲ, ಅಜ್ಜ ಮತ್ತು ಅಜ್ಜಿಯನ್ನು ಬಂಧಿಸಿದರು. ಪೊಕ್ಸೊ, ಬಾಲ್ಯವಿವಾಹ ಕಾನೂನು ಪ್ರಕಾರ ಇವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಅಜ್ಜ-ಅಜ್ಜಿಗೆ ಒಂದು ತಿಂಗಳ ಬಳಿಕ ಮತ್ತು ವಕೀಲನಿಗೆ 10 ತಿಂಗಳ ಬಳಿಕ ಜಾಮೀನು ಲಭಿಸಿತ್ತು.

ಕಳೆದ ವರ್ಷ ಸೆಪ್ಟಂಬರ್‍ಗೆ ಹದಿನೆಂಟು ವರ್ಷ ವಯಸ್ಸಿನಲ್ಲಿ ಬಾಲಕಿ ಪತಿಯ ಜೊತೆ ಜೀವಿಸಲು ಸಿದ್ಧ, ಕೇಸು ರದ್ದುಪಡಿಸಬೇಕೆಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು. ಕೇಸು ವಾಪಸು ಪಡೆಯುತ್ತಿರುವುದಾಗಿ ಅಫಿದಾವಿತ್ ಸಲ್ಲಿಸಿದ್ದಳು. ತದನಂತರ ಕೋರ್ಟು ಆದೇಶ ಹೊರಡಿಸಿದರು. ಆದರೆ ಇದು ಸಮಾಜಕ್ಕೆ ಹಾನಿ ಮಾಡಬಹುದೆಂಬ ಪ್ರಾಸಿಕ್ಯೂಟರ್ ವಾದವನ್ನು ಕೋರ್ಟು ‘ಬಾಲಕಿಯ ಭವಿಷ್ಯ ಮುಖ್ಯ’ವೆಂದು ಹೇಳಿ ತಿರಸ್ಕರಿಸಿದೆ. ಆದರೂ ಕೇಸು ರದ್ದು ಪಡಿಸುವ ಅರ್ಜಿಯನ್ನು ಈಗ ವಿಚಾರಣೆಗೆತ್ತಿಕೊಳ್ಳಲು ತಿರಸ್ಕರಿಸಿದೆ. ಹತ್ತು ಎಕರೆ ಜಮೀನು ಬಾಲಕಿಯ ಹೆಸರಿನಲ್ಲಿ ಮಾಡಬೇಕು. ಅವರ ಹೆಸರಿನಲ್ಲಿ ಏಳು ಲಕ್ಷ ಠೇವಣಿ ಇರಿಸಬೇಕು. ಶಿಕ್ಷಣವನ್ನು ದೃಢಪಡಿಸಬೇಕು ಎಂದು ವಕೀಲನಿಗೆ ಕೋರ್ಟು ಸೂಚಿಸಿದೆ. ಸೆಪ್ಟಂಬರ್‍ನಲ್ಲಿ ಇದನ್ನು ಪೂರೈಸಿದರೆ ಕೇಸು ರದ್ದು ಪಡಿಸುವ ಅರ್ಜಿಯಲ್ಲಿ ತೀರ್ಮಾನಿಸಲಾಗುವುದು ಎಂದು ಕೋರ್ಟು ತಿಳಿಸಿದೆ.