ಮಸೀದಿಯಲ್ಲಿ ಆಶ್ರಯ ಪಡೆದ ಹಿಂದೂ ಮುಸ್ಲಿಂ ನೆರೆ ಸಂತ್ರಸ್ಥರು: ಜಮಾಅತೆ ಇಸ್ಲಾಮಿಗೆ ಕೃತಜ್ಞತೆ ಸಲ್ಲಿಸಿದ ಸಂತ್ರಸ್ಥರು

0
7941

ನಿಲಂಬೂರ್: ಭೀಕರ ಮಳೆಗೆ ತತ್ತರಿಸಿದ ಕೇರಳದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿದ್ದು ಈಗಾಗಲೇ ಸೇನಾ ಪಡೆ ಸೇರಿದಂತೆ ಸ್ವಯಂ ಸೇವಕರ ಘಟಕಗಳು ಜನರ ಜೀವ ರಕ್ಷಣೆಗೆ ಸಕ್ರಿಯಗೊಂಡಿವೆ.ನೀಲಂಬೂರು ಸಮೀಪದ ಜಮಾಅತೆ ಇಸ್ಲಾಮೀ ಹಿಂದ್ ಅಧೀನದ  ಮಸೀದಿಯೊಂದರಲ್ಲಿ ಸರ್ವ ಧರ್ಮೀಯ ಸಂತ್ರಸ್ತರಿಗೂ ಆಶ್ರಯವೊದಗಿಸುವ ಮೂಲಕ ಸೌಹಾರ್ದತೆಯನ್ನು ಮೆರೆದಿದೆ.

ವೆಳ್ಳಂಗಾವ್, ಮುದಿಲ್ ಮೂಲ ಕಾಂಞರಿಪುಯಕ್ಕೆ  ನೆರೆ ನೀರು ನುಗ್ಗಿದಾಗ ಸಂತ್ರಸ್ತರಿಗೆ ನಂಬೂದಿರಿ ಪೊಟ್ಟಿಯೆಂಬಲ್ಲಿನ ಮಸ್ಚಿದುನ್ನೂರಿನಲ್ಲಿ ಆಶ್ರಯ ಒದಗಿಸಲಾಗಿದೆ‌. ಮಸೀದಿಯಲ್ಲಿ ಒಟ್ಟು 25 ಕುಟುಂಬಗಳ 123 ಜನರಿದ್ದು ಇವರಲ್ಲಿ 11 ಹಿಂದೂ ಕುಟುಂಬಗಳಿವೆ. ಬುಧವಾರ ಭೂ ಕುಸಿತ ಸಂಭವಿಸಿದಾಗ ಮಸೀದಿಗೆ 16 ಕುಟುಂಬಗಳು ಹಾಗೂ ತದನಂತರದ ಬೆಳವಣಿಗೆಗಳಿಂದಾಗಿ ಇತರೆ ಕುಟುಂಬಗಳಿಗೂ ಕೂಡ ಮಸೀದಿಯಲ್ಲಿಯೇ ಆಶ್ರಯ ಒದಗಿಸಿ ಕೊಡಲಾಗಿದೆ. ಸಂತ್ರಸ್ಥರು ಜಮಾಅತ್ ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.