ಪುಣೆಯ ಸೆರಂ ಕೊರೋನ ವ್ಯಾಕ್ಸಿನ್ ತಯಾರಿಕಾ ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ

0
474

ಸನ್ಮಾರ್ಗ ವಾರ್ತೆ

ಪುಣೆ: ಕೊರೋನ ವ್ಯಾಕ್ಸಿನ್ ತಯಾರಿಕಾ ಕೇಂದ್ರದ ಪುಣೆ ಸಿರಂ ಇನ್ಸಿಟಿಟ್ಯೂಟಿನಲ್ಲಿ ಭಾರೀ ಬೆಂಕಿ ಅನಾಹುತ ನಡೆದಿದ್ದು ಕೊರೋನ ವ್ಯಾಕ್ಸಿನ್ ನಿರ್ಮಿಸುವ ಕಟ್ಟಡಕ್ಕೆ ಬೆಂಕಿ ಹಿಡಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟರ್ಮಿನಲ್ ಒಂದರ ಎರಡನೇ ಅಂತಸ್ತಿಗೆ ಬೆಂಕಿ ಹಿಡಿದಿದ್ದು ಎಂಟು ಅಗ್ನಿಶಾಮಕ ದಳಗಳು ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದೆ. ಇನ್ನಷ್ಟು ಅಗ್ನಿಶಾಮಕ ದಳಗಳು ಇಲ್ಲಿಗೆ ಆಗಮಿಸಲಿವೆ.

ವಿಜ್ಞಾನಿಗಳನ್ನು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬೆಂಕಿ ಹಿಡಿಯಲು ಕಾರಣವೇನೆಂದು ಸ್ಪಷ್ಟವಾಗಿಲ್ಲ. ಆಕ್ಸ್‌ಫರ್ಡ್ ಆಸ್ಟ್ರೊ ಸೆನಕ ಸೇರಿ ಇಲ್ಲಿ ಕೊವಿಶೀಲ್ಡ್ ವ್ಯಾಕ್ಸಿನ್ ತಯಾರಿಸಲಾಗುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರ ಸಮೀಪದ ಕಟ್ಟಡದಲ್ಲಿ ವ್ಯಾಕ್ಸಿನ್ ತಯಾರಿ ನಡೆಯುತ್ತಿದೆ.