ಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾ ಮಸೀದಿ ಕೆಡವಲು ದಾಖಲೆ ಕೇಳಿದ ಮಥುರಾ ಜಿಲ್ಲಾ ಕೋರ್ಟು

0
676

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.14: ಶ್ರೀಕೃಷ್ಣ ಜನ್ಮಸ್ಥಳದಲ್ಲಿ ಶಾಹಿ ಈದ್ಗಾಹ್ ಮಸೀದಿ ಕಟ್ಟಿಸಲಾಗಿದ್ದು ಕೆಡಬೇಕೆಂದು ಸಲ್ಲಿಸಿದ ಅರ್ಜಿಯಲ್ಲಿ ದಾಖಲೆಗಳನ್ನು ಹಾಜರುಪಡಿಸುವಂತೆ ಮಥುರಾ ಜಿಲ್ಲಾ ಕೋರ್ಟು ಫಿರ್ಯಾದುದಾರರಿಗೆ ತಿಳಿಸಿದೆ. 13.37 ಎಕರೆ ಜಮೀನು ಶ್ರೀಕೃಷ್ಣ ಜನ್ಮಭೂಮಿಯದ್ದು ಅದನ್ನು ಬಿಟ್ಟುಕೊಡಬೇಕೆಂದು ಇದಕ್ಕಿಂತ ಮೊದಲು ನಡೆದ ಪ್ರಕರಣಗಳ ದಾಖಲೆಗಳನ್ನು ತರಬೇಕೆಂದು ಕೋರ್ಟು ಹೇಳಿದೆ. ಅಕ್ಟೋಬರ್ 16ಕ್ಕೆ ಕೋರ್ಟ್ ಅರ್ಜಿಯಲ್ಲಿ ವಿಚಾರಣೆ ನಡೆಸಲಿದೆ.

1947ಕ್ಕಿಂತ ಮುಂಚಿನ ಯಥಾಸ್ಥಿತಿ ಬದಲಾಯಿಸಲು 1991ರ ಆರಾಧಾನಾಲಯ ಕಾನೂನು ಅನುಮತಿಸುವುದಿಲ್ಲ ಎಂದು ಸೆಪ್ಟಂಬರ್ 30ಕ್ಕೆ ಮಥುರಾ ಸಿವಿಲ್ ಕೋರ್ಟು ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳದೆ ತಳ್ಳಿಹಾಕಿತ್ತು.

ಇದರ ನಂತರ ದೂರುದಾರರು ಜಿಲ್ಲಾ ಕೋರ್ಟಿನಲ್ಲಿ ಅಪೀಲು ಹೋಗಿದ್ದಾರೆ. ಮೊಗಲರ ದೊರೆ ಔರಂಗಜೇಬ್ ಮಂದಿರ ಕೆಡವಿ ಮಸೀದಿ ಕಟ್ಟಿದುದೆಂದು ಅವರು ಹೇಳುತ್ತಿದ್ದಾರೆ. ಒಮ್ಮೆ ಪ್ರತಿಷ್ಠಾಪನೆಯಾದ ಜಾಗ ಅದನ್ನು ಯಾರೇ ಕೆಡವಿದರೂ ಅಲ್ಲಿ ಪುನಃ ಪ್ರತಿಷ್ಠಾಪನೆ ನಡೆಯಬೇಕಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.