ಎನ್.ಐ.ಎ ಬಿಜೆಪಿಯ ಸಾಕು ಪ್ರಾಣಿ- ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಕಿಡಿ

0
509

ಸನ್ಮಾರ್ಗ ವಾರ್ತೆ

ಕಾಶ್ಮೀರ: ಎನ್.ಐ.ಎ (ನ್ಯಾಶನಲ್ ಇನ್ವೆಸ್ಟಿಗೇಷನ್ ಏಜನ್ಸಿ)ಯನ್ನು ಪಿ.ಡಿ.ಪಿ ನಾಯಕಿ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ. ಎನ್.ಐ.ಎ ಬಿಜೆಪಿಯ ಸಾಕು ಪ್ರಾಣಿ ಎಂದು ಮೆಹಬೂಬಾ ಖಡಕ್ ಆಗಿ ವಿಮರ್ಶೆ ಮಾಡಿದ್ದಾರೆ. ತಮ್ಮ ಜೊತೆ ಅಕ್ಷರಶಃ ತಲೆಬಾಗದವರನ್ನೆಲ್ಲ ಬೆದರಿಸುವುದು ಮತ್ತು ಭಯಪಡಿಸುವುದಾಗಿದೆ ಬಿಜೆಪಿ ಎನ್.ಐ.ಎ ಮೂಲಕ ಸಾಕ್ಷಾತ್ಕರಿಸುತ್ತಿರುವುದು ಎಂದು ಮೆಹಬೂಬಾ ಆರೋಪಿಸಿದರು.

ಕಾಶ್ಮೀರದ ಹಲವೆಡೆ ಎನ್.ಐ.ಎ ನಡೆಸಿದ ದಾಳಿಯನ್ನು ಖಂಡಿಸಿ ಮೆಹಬೂಬಾ ಮುಫ್ತಿ ಪ್ರತಿಕ್ರಿಯಸಿದರು. ‘ಗ್ರೇಟರ್ ಕಾಶ್ಮೀರ’ ದಿನಪತ್ರಿಕೆಯ ಕಛೇರಿ, ಮಾನವ ಹಕ್ಕು ಹೋರಾಟಗಾರ ಖುರಾಂ ಫರ್ವೇಸ್‌ರ ವಸತಿ, ಎನ್.ಜಿ.ಒ ಸಂಘಟನೆಗಳ ಆಫೀಸ್‌‌ಗಳೂ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್.ಐ.ಎ ದಾಳಿ ನಡೆಸಿತ್ತು. ಇವುಗಳ ಪೈಕಿ ಬಹುತೇಕ ಶ್ರೀನಗರದಲ್ಲಾಗಿದೆ.

ಪೋಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ ಕೂಡ ಎನ್.ಐ.ಎ ಜೊತೆ ಬೆಂಗಾವಲಾಗಿ ನಿಂತು ದಾಳಿಗೆ ಸಹಕರಿಸಿದೆ. ಎನ್.ಜಿ.ಒ ಸಂಘಟನೆಗಳು ನಡೆಸಿದ ಬಂಡವಾಳಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಭಯೋತ್ಪಾದನಾ ಚಟುವಟಿಕೆಗಳಲ್ಲೂ ಎನ್.ಜಿ.ಒ ಹಣ ವಿನಿಮಯ ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್.ಐ.ಎ ಈ ಕ್ರಮ ಕೈಗೊಂಡಿದೆ.