ವೈಟ್‍ಹೌಸ್‍ನಿಂದ ಹೊರ ಹೋಗುತ್ತಿದ್ದಂತೆ ಟ್ರಂಪ್ ದಂಪತಿ ನಡುವೆ ವಿಚ್ಛೇದನ?

0
1221

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.9 : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್ ವೈಟ್‍ಹೌಸ್ ತೆರವುಗೊಳಿಸುತ್ತಿದ್ದಂತೆ ಪತ್ನಿ ಮೆಲಾನಿಯ ಟ್ರಂಪ್‍ರಿಗೆ ವಿವಾಹ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಡಿದೆ. ಶೀಘ್ರದಲ್ಲಿ ಇಬ್ಬರು ಬೇರ್ಪಡಲಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. 15 ವರ್ಷದ ದಾಂಪತ್ಯ ಸಂಬಂಧ ಇದರೊಂದಿಗೆ ಕೊನೆಗೊಳ್ಳಲಿದೆ.

ವೈಟ್ ಹೌಸ್‍ನಿಂದ ಹೊರಬಂದ ಕೂಡಲೇ ಟ್ರಂಪ್‍ರೊಂದಿಗಿನ ಸಂಬಂಧವನ್ನು ತೊರೆಯಲು ಮೆಲಾನಿಯ ನಿರ್ಧರಿಸಿದ್ದರು ಎಂದು ವೈಟ್ ಹೌಸ್ ಆಫ್ ಪಬ್ಲಿಕ್ ಲೆಶನ್ನ ಮಾಜಿ ಕಮ್ಯುನಿಕೇಶನ್ಸ್ ಡೈರಕ್ಟರ್ ಒಮರೊಸ್ ಮಾನಿಗಾಲ್ಟ್ ನ್ಯೂಮಾನ್ ಹೇಳಿದ್ದಾರೆ. ಟ್ರಂಪ್ ವೈಟ್ ಹೌಸ್‍ನಲ್ಲಿರುವಷ್ಟು ಕಾಲ ಅಪಮಾನ ಸಹಿಸಿ ಮುಂದುವರಿಯಲು ಮೆಲಾನಿಯ ಶ್ರಮಿಸಿದರು. ಟ್ರಂಪ್ ಪ್ರತೀಕಾರವೆಸಗಿದರೆ ಎಂಬ ಹೆದರಿಕೆ ಅವರನ್ನು ಕಾಡುತ್ತಿತ್ತು ಎಂದು ನ್ಯೂಮಾನ್ ಹೇಳಿದರು. 2017ರಲ್ಲಿ ಟರಂಪ್‍ರೊಂದಿಗೆ ಭಿನ್ನಾಭಿಪ್ರಾಯದಲ್ಲಿ ನ್ಯೂಮಾನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಟ್ರಂಪ್ ವೈಟ್‍ಹೌಸಿಗೆ ಬಂದು ಐದು ತಿಂಗಳ ಬಳಿಕ ಮೆಲಾನಿಯ ನ್ಯೂಯಾಕಿನಿಂದ ವಾಷಿಂಗ್ಟನ್‍ಗೆ ವಾಸವನ್ನು ಬದಲಿಸಿಕೊಂಡಿದ್ದರು. ಮಗನ ಕಲಿಕೆಗಾಗಿ ಹೀಗೆ ಮಾಡಿದ್ದರು. 2006ರಲ್ಲಿ ಟ್ರಂಪ್ ಮೆಲಾನಿಯ ದಂಪತಿಗಳಿಗೆ ಬಾರನ್ ಹುಟ್ಟಿದ್ದ. 2005ರಲ್ಲಿ ಇಬ್ಬರು ಮದುವೆಯಾಗಿದ್ದರು. 2001ರಲ್ಲಿ ಮೆಲಾನಿಯ ಅಮೆರಿಕದ ಪೌರತ್ವವವನ್ನು ಪಡೆದುಕೊಂಡಿದ್ದರು. ಟ್ರಂಪ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಇಬ್ಬರ ನಡುವೆ ಸಮಸ್ಯೆಯಿತ್ತು ಎಂದು ಹಲವು ವರದಿಗಳು ಹೊರಬಂದಿದ್ದವು. 2016ರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮೆಲಾನಿಯ ಸಕ್ರಿಯವಾಗಿದ್ದರು. 2020ರ ಚುನಾವಣೆಯಲ್ಲಿ ಮೌನವಾಗಿದ್ದರು.