ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ನಿರ್ಭಯಾ ಪ್ರಕರಣ ಅಪರಾಧಿಗಳು

0
603

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.8: ದೇಶವನ್ನೇ ನಡುಗಿಸಿದ ದಿಲ್ಲಿ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ (ನಿರ್ಭಯಾ ಪ್ರಕರಣ)ದಲ್ಲಿ ಗಲ್ಲು ಶಿಕ್ಷೆಗೊಳಗಾದ ತಿಹಾರ್ ಜೈಲಿನಲ್ಲಿ ಇರುವ ಅಪರಾಧಿ ವಿನಯ್‍ಕುಮಾರ್ ಶರ್ಮ, ರಾಷ್ಟ್ರಪತಿ ರಾಮನಾಥ್ ಕೋವಿಂದರಿಗೆ ದಯಾ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆ ಮರು ಪರಾಮರ್ಶೆ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿತ್ತು. 2012 ಡಿಸೆಂಬರ್ ಹದಿನಾರಕ್ಕೆ ರಾತ್ರೆ ವೇಳೆ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ದಿಲ್ಲಿಯ ನಗರ ನಿಗಮದ ಬಸ್‍ನಲ್ಲಿ ಅತ್ಯಾಚಾರಕ್ಕೊಳಗಾಗಿದ್ದಳು.

ಸಿಂಗಾಪುರದಲ್ಲಿ ಚಿಕಿತ್ಸೆಯ ವೇಳೆ ಎರಡು ವಾರಗಳ ಬಳಿಕ ಮೃತಪಟ್ಟಿದ್ದಳು. ಪ್ರಕರಣದಲ್ಲಿ ಆರು ಮಂದಿ ಅಪರಾಧಿಗಳಿದ್ದು ಅಪ್ರಾಪ್ತ ವಯಸ್ಸಿನ ಒಬ್ಬರನ್ನು ಹೊರತುಪಡಿಸಿ ಇತರ ಐವರಿಗೂ ವಿಚಾರಣಾ ಕೋರ್ಟು ಗಲ್ಲುಶಿಕ್ಷೆ ವಿಧಿಸಿತ್ತು. ಇದನ್ನು ಹೈಕೋರ್ಟು, ಸುಪ್ರೀಂಕೋರ್ಟು ಎತ್ತಿಹಿಡಿದಿತ್ತು.

ಗಲ್ಲು ಶಿಕ್ಷೆ ತೀರ್ಪು ಬಂದವರಲ್ಲಿ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನಿಬ್ಬರು ಆರೋಪಿಗಳು ಮುಕೇಶ್, ಪವನ್ ಗುಪ್ತ ಗಲ್ಲು ಶಿಕ್ಷೆಗೆ ಒಳಗಾಗಿರುವ ಇತರ ಆರೋಪಿಗಳು.