ಟ್ವಿಟ್ಟರ್ ನಲ್ಲಿ ಮೋದಿಯನ್ನು ಟೀಕಿಸಿದ್ದಾರೆಂದು ಆರೋಪಿಸಿ ಸ್ಪೈಡರ್ ಮ್ಯಾನ್‍ಗೆ ‘ಭಕ್ತರ’ ದಾಳಿ: ಅಸಲಿಗೆ ಅವರಲ್ವೇ ಅಲ್ಲ …!!!

0
352

ಹಾಗಾದರೆ ಅವರು ಯಾರು? ಈ ಸುದ್ದಿ ಓದಿ…

ಸನ್ಮಾರ್ಗ ವಾರ್ತೆ:

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ ಎಂದು ಆರೋಪಿಸಿ, ಸ್ಪೈಡರ್ ಮ್ಯಾನ್‍ ಚಿತ್ರದ ನಾಯಕ ನಟ ಟೋಮ್ ಹಾಲೆಂಡ್ ರವರಿಗೆ ಟ್ವಿಟ್ಟರ್ ನಲ್ಲಿ ದಾಳಿ ಮಾಡಿರುವ ಮೋದಿ ಭಕ್ತರು, ನೈಜ ವಿಷಯ ತಿಳಿಯುವಾಗ ತಡವಾಗಿತ್ತು. ಹಾಲಿವುಡ್ ನಟ ಟೋಮ್ ಹಾಲೆಂಡ್ ಮೋದಿಯನ್ನು ಟೀಕಿಸಿದ್ದಾರೆ ಎಂದು ಆರೋಪಿಸಿ ದಾಳಿ ಮಾಡಿದಾಗ ನಿಜವಾಗ್ಲೂ ಅದು ಅವರಾಗಿರಲಿಲ್ಲ, ಬದಲಾಗಿ ಮೋದಿಯನ್ನು ಟೀಕಿಸಿದ್ದು ಇಂಗ್ಲಿಷ್ ಬರಹಗಾರ, ಕ್ರಿಕೆಟಿಗ ಟಾಂ ಹಾಲೆಂಡ್.

ಮೊಟೆರಾ ಕ್ರಿಕೆಟ್ ಅಂಗಣಕ್ಕೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಹೆಸರಿನ ಬದಲಿಗೆ ನರೇಂದ್ರ ಮೋದಿ ಹೆಸರು ಇಟ್ಟದ್ದಕ್ಕೆ ಟ್ವಿಟ್ಟರ್ ನಲ್ಲಿ ಟೀಕಿಸಲಾಗಿತ್ತು. ಟೀಕಿಸಿದ್ದು ಇಂಗ್ಲಿಷ್ ಬರಹಗಾರ, ಕ್ರಿಕೆಟಿಗ ಟಾಂ ಹಾಲೆಂಡ್. ಇದನ್ನು ಗಮನಿಸಿದ ಮೋದಿ ಭಕ್ತರು ವ್ಯಂಗ್ಯೋಕ್ತಿ ಟ್ವೀಟ್ ವಿರುದ್ಧ ಟ್ವಿಟ್ಟರ್ ನಲ್ಲಿ ಬಾಯ್ಕಾಟ್ ಸ್ಪೈಡರ್ ಮ್ಯನ್ ಬಹಿಷ್ಕಾರಕ್ಕೆ ಕರೆ ನೀಡಿದರು. ಆದರೆ ಬಹಿಷ್ಕರಿಸಲು ಆಯ್ಕೆ ಮಾಡಿದ ವ್ಯಕ್ತಿ ಸ್ಪೈಡರ್ ಮ್ಯಾನ್‍ ಚಿತ್ರದ ನಾಯಕ ನಟ ಟೋಮ್ ಹಾಲೆಂಡ್. ಆದರೆ ಇಲ್ಲಿ ವ್ಯಕ್ತಿ ಬದಲಾಗಿದ್ದರು.

ಟೋಮ್ ಹಾಲೆಂಡ್ ಎಂಬ ಟ್ವಿಟರ್ ಖಾತೆಯಲ್ಲಿ ಹಾಲಿವುಡ್ ನಟ ಎಂದು ಭಾವಿಸಿ ಸ್ಪೈಡರ್ ಮ್ಯಾನ್‍ ಅನ್ನು ಬಹಿಷ್ಕರಿಸಬೇಕೆಂದು ಕರೆ ನೀಡಲಾಗಿತ್ತು. ಸ್ಪೈಡರ್ ಮ್ಯಾನ್‍ 3 ಚಿತ್ರವನ್ನು ಬಹಿಷ್ಕರಿಸಬೇಕೆಂದು ಪ್ರಚಾರ ನಡೆದಿತ್ತು. ಸಿನೆಮಾ ನಿಷೇಧಿಸಬೇಕೆಂದು ಹೇಳಲಾಗಿತ್ತು.

ನಟನ ವಿರುದ್ಧ ಮೋದಿ ಭಕ್ತರ ಟ್ವಿಟರ್ ದಾಳಿ ಆರಂಭವಾಗುತ್ತಿದ್ದಂತೆ ಬಾಯ್ಕಾಟ್ ಸ್ಪೈಡರ್ ಮ್ಯಾನ್‍, ಬ್ಯಾನ್ ಸ್ಪೈಡರ್ ಮ್ಯಾನ್‍ ಹ್ಯಾಶ್ ಟ್ಯಾಗ್ ಟ್ರೆಂಡ್ ಆಯ್ತು. ಈ ಮಧ್ಯೆ ವ್ಯಕ್ತಿ ಬದಲಾಗಿದ್ದು ಗೊತ್ತಾಗಿ ಹಲವರು ಹಿಂದೆ ಸರಿದರೂ, ಕೆಲವ್ರು ಸ್ಪೈಡರ್ ಮ್ಯಾನ್ ಮೇಲೆ ದಾಳಿ ಮುಂದುವರಿಸಿದ್ದಾರೆ. ಇದರಿಂದ ಭಕ್ತರೇ ಟ್ರಾಲ್‍ ಒಳಗಾಗಿದ್ದಾರೆ.

ಮೊಟೆರೊ ಸ್ಟೇಡಿಯಂಗೆ ಮೋದಿಯ ಹೆಸರು ಇಟ್ಟದ್ದಕ್ಕೆ ಟೋಂ ಹಾಲೆಂಡ್ ವ್ಯಂಗ್ಯವಾಗಿ ಟೀಕೆ ಮಾಡಿದ್ದರು. ವಿಶ್ವದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ತನ್ನ ಹೆಸರು ಇಡಲು ತೀರ್ಮಾನಿಸಿದ ಮೋದಿಯ ವಿನಯಕ್ಕೆ ಅಭಿಮಾನವಿದೆ ಎಂದು ಅವರು ಟ್ವೀಟ್ ಮಾಡಿದ್ದರು.